ಮೊಸಳೆಗಳಿದ್ದ ಸ್ಥಳದಲ್ಲಿ ತೆರಳಿ ವಿದ್ಯುತ್ ರಿಪೇರಿ ಮಾಡಿದ ಹೆಸ್ಕಾಂ ಸಿಬ್ಬಂದಿ

Line mens adventure
Published on

ಕಾರವಾರ: ಮೊಸಳೆಗಳಿರುವ ಸ್ಥಳದಲ್ಲಿ ಧೈರ್ಯದಿಂದ ತೆರಳಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಮಸ್ಯೆ ಸರಿಪಡಿಸಿದ್ದಾರೆ.
ದಾಂಡೇಲಿಯ ಕುಳಗಿ- ಬೊಮ್ಮನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಸುವ 11 ಕೆವಿ ವಿದ್ಯುತ್ ಮರ‍್ಗದಲ್ಲಿ ಮರದ ಟೊಂಗೆ ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕಾಳಿ ನದಿಯ ನಡುವಿನ ನಡುಗಡ್ಡೆಯಲ್ಲಿ ಘಟನೆ ನಡೆದಿದ್ದು, ಇಇ ಪುರುಷೋತ್ತಮ ಮಲ್ಯ, ಎಇಇ ದೀಪಕ ನಾಯಕ ಅವರ ಮರ‍್ಗರ‍್ಶನದಲ್ಲಿ ಹೆಸ್ಕಾಂ ಶಾಖಾಕಾರಿ ರಾಹುಲ್ ಹಾಗೂ ಉದಯ ಅವರ ಸಹಕಾರದೊಂದಿಗೆ ದಾಂಡೇಲಿಯ ಜಂಗಲ್ ಲಾಡ್ಜಸ್ ಹಾಗೂ ವಿಷ್ಣುಮರ‍್ತಿ ರಾವ್ ಅವರ ರಿವರ್ ರ‍್ಯಾಫ್ಟಿಂಗ್ ತಂಡದೊಂದಿಗೆ ರ‍್ಯಾಫ್ಟಿಂಗ್‌ನಲ್ಲಿ ತೆರಳಿದ ಸಿಬ್ಬಂದಿ ಕ್ರಮ ವಹಿಸಿದ್ದಾರೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net