ಸರ್ಕಾರಿ ಪದವಿ ಪೂರ್ವ ಕಾಲೇಜ್​ಗೆ ವೀರಾಗ್ರಣಿ

4MDG1 PU- SPORTS
Published on

ಮುಂಡರಗಿ: ಪಟ್ಟಣದ ಎಂ.ಎಸ್. ಡಂಬಳ ಮಹಿಳಾ ಪದವಿ ಪೂರ್ವ ಕಾಲೇಜ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2023-24ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಸಮಗ್ರ ಆಟಗಳಲ್ಲಿ ವೀರಾಗ್ರಣಿ ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಬಾಲಕರ ವೈಯಕ್ತಿಕ ವಿಭಾಗ: ಹನುಮಂತ ಚೌಡಕಿ 100 ಮೀ. ಓಟ ಪ್ರಥಮ, ಮಲ್ಲೇಶ ಉಪ್ಪಾರ 200 ಮೀ. ಓಟ ಪ್ರಥಮ, ಮಂಜುನಾಥ ಕೆ. 1500 ಮೀ. ಓಟ ಪ್ರಥಮ, ಸಂತೋಷ ಮೋರನಾಳ 5,000 ಮೀ. ಓಟ ಪ್ರಥಮ, ಮಹಮ್ಮದಸಾಬ್ ಹಾರೋಗೇರಿ ಉದ್ದ ಜಿಗಿತ ಪ್ರಥಮ, ಮಂಜುನಾಥ ಬಿದರಹಳ್ಳಿ ತ್ರಿಬಲ್ ಜಂಪ್ ಪ್ರಥಮ, ಬಸವರಾಜ ಅವೋದಿ 1500 ಮೀ. ಓಟ ದ್ವಿತೀಯ, ನಂದೀಶ ಬನ್ನಿಕೊಪ್ಪ ಭಲ್ಲೆ ಎಸೆತ ದ್ವಿತೀಯ, ಪ್ರವೀಣ ದೋಸಿಗಾರ ಗುಂಡು ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಬಾಲಕಿಯರ ವೈಯಕ್ತಿಕ ವಿಭಾಗ: ಕೌಶಲ್ಯ ಕ್ಯಾಸಲಾಪುರ 200 ಮೀ. ಓಟ ಪ್ರಥಮ, ರೋಜಾ ನದಾಫ್ 1500 ಮೀ. ಓಟ, 5,000 ಮೀ. ಓಟ ಹಾಗೂ ಗುಡ್ಡಗಾಡು ಓಟ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮಲ್ಲಮ್ಮ ಗೌರಿ 1500ಮೀ. ಓಟ ದ್ವಿತೀಯ, ಕಾವೇರಿ ಉಪ್ಪಾರ ಗುಡ್ಡಗಾಡು ಓಟ ದ್ವಿತೀಯ, ಭೂಮಿಕಾ ಬೀರಣ್ಣನವರ ಚಕ್ರ ಎಸೆತ ದ್ವಿತೀಯ, ವಿದ್ಯಾಶ್ರೀ ಈಟಿ ಎತ್ತರ ಜಿಗಿತ ದ್ವಿತೀಯ, ದೀಪಾ ಎಸ್. ಭಲ್ಲೆ ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಬಾಲಕಿಯರ ಗುಂಪು ಆಟಗಳ ವಿಭಾಗ: ಥ್ರೋಬಾಲ್ ಪ್ರಥಮ, ಖೋಖೋ ಪ್ರಥಮ ಪಡೆದಿದ್ದಾರೆ. ಬಾಲಕರ ಗುಂಪು ಆಟಗಳ ವಿಭಾಗ: ಖೋಖೋ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರೋಜಾ ನದಾಫ್ ಅವರು ವೈಯಕ್ತಿಕ ಕ್ರೀಡೆಗಳಲ್ಲಿ ಮೂರು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net