ಅಡಕೆ ಕಟಾವು ಮಾಡಿದವರ ಮೇಲೆ ಕೇಸ್ ಕಾರಣ ಇಲ್ಲಿದೆ ಕೇಳಿ!

High court logo 2
Published on

ಮುಂಡಗೋಡ: ನ್ಯಾಯಾಲಯದ ಆದೇಶದ ವಿರುದ್ಧವಾಗಿ ಅಡಕೆ ಬೆಳೆಯನ್ನು ಕಟಾವು ಮಾಡಿ ಸಾಗಾಟ ಮಾಡಲು ಯತ್ನಿಸಿದ ಇಬ್ಬರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಇಂದೂರ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ಸ.ನಂ. 59/4ರಲ್ಲಿ ಅಡಕೆ ತೋಟವಿದ್ದು, ಈ ಅಡಕೆ ತೋಟದ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ವ್ಯಾಜ್ಯ ಮುಗಿಯುವವರೆಗೂ ಅಡಕೆ ಬೆಳೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ನ್ಯಾಯಾಲಯವು ಅಡಕೆ ಬೆಳೆಯನ್ನು ಕಟಾವು ಮಾಡಿ ಅದರಿಂದ ಬಂದ ಹಣವನ್ನು ನ್ಯಾಯಾಲಯಕ್ಕೆ ಭರಣ ಮಾಡುವಂತೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿತ್ತು. ಆದರೆ, ಭಾನುವಾರ ಕೊಪ್ಪ ಗ್ರಾಮದ ಈಶ್ವರಗೌಡ ಸಿದ್ದನಗೌಡ ಪಾಟೀಲ ಹಾಗೂ ವಿನಾಯಕ ಈಶ್ವರಗೌಡ ಪಾಟೀಲ ಎಂಬವರು 60 ಕ್ವಿಂಟಾಲ್ ಅಡಕೆ ಬೆಳೆಯನ್ನು ಕಟಾವು ಮಾಡಿ ಬೊಲೇರೋ ವಾಹನದಲ್ಲಿ ಸಾಗಾಟ ಮಾಡಲು ಯತ್ನಿಸಿರುವ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಪ್ಪ ಮಹಾರೆಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net