ಹೇಮೆ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆಗೆ ನನ್ನ ವಿರೋಧ ಇದೆ

Heme_Somanna
Published on

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆಗೆ ನೂರಕ್ಕೆ ನೂರು ನನ್ನ ವಿರೋಧ ಇದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್​ ರಾಜ್ಯಕ್ಕೆ ಉಪಮುಖ್ಯಮಂತ್ರಿ. ಕೇವಲ ರಾಮನಗರ, ಕನಕಪುರ, ಕುಣಿಗಲ್​ಗೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಉಪ ಮುಖ್ಯಮಂತ್ರಿ. ಅದನ್ನ ಅವರು ಮೊದಲ ಅರ್ಥ ಮಾಡಿಕೊಳ್ಳಬೇಕು ಎಂದು ತೀಕ್ಷ$$$$್ಣವಾಗಿ ಪ್ರತಿಕ್ರಿಯಿಸುವ ಮೂಲಕ ಹೇಮೆ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆ ಹೋರಾಟ ಪರವಾಗಿ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು.

ತುಮಕೂರಿನ ನಾಗರಿಕರು, ಮತದಾರರಿಗೆ ಯಾರೇ ಅನ್ಯಾಯ ಮಾಡಿದರು ಅದು ಅನ್ಯಾಯವೇ. ನಾನು ಬರುವುದಕ್ಕೆ ಮುನ್ನ ಎಲ್ಲವೂ ನಡೆದುಹೋಗಿತ್ತು. ಈ ಯೋಜನೆ ನನ್ನ ಕಾಲದಲ್ಲಿ ಶುರುವಾಗಿದ್ದಲ್ಲ. ಲಿಂಕ್​ ಕೆನಾಲ್​ ಯೋಜನೆಯಿಂದ ಜಿಲ್ಲೆಗೆ ಆಗುವ ತೊಂದರೆ ಬಗ್ಗೆ ಯಾರ್ಯಾರಿಗೆ ಹೇಳಬೇಕು ಅವರಿಗೆಲ್ಲ ಹೇಳಿದ್ದೀನಿ. ಮಂತ್ರಿಗಳ ಗಮನಕ್ಕು ಸಹ ತಂದಿದ್ದೀನಿ. ನಾನೊಬ್ಬ ಸಚಿವನಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯತೆ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

3 ವರ್ಷದಲ್ಲಿ 256 ಸಾವು: ತುಮಕೂರು (ಊರುಕೆರೆ)&ನೆಲಮಂಗಲ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ 3 ವರ್ಷದಲ್ಲಿ 256 ಮಂದಿ ಸಾವನ್ನಪ್ಪಿದ್ದು ಎಲ್ಲಿ ಅಪಘಾತಗಳು ಆಗುತ್ತಿವೆಯೇ ಅದೇ ಸ್ಥಳದಲ್ಲಿ ಪದೇ ಪದೇ ಆಗುತ್ತಿದೆ ಎಂದು ಸೋಮಣ್ಣ ಕಳವಳ ವ್ಯಕ್ತಪಡಿಸಿದರು.

ನೆಲಮಂಗಲದಿಂದ ತುಮಕೂರು ಹೊರವಲಯದ ಊರುಕೆರೆವರೆಗೆ 2,046 ಕೋಟಿ ರೂ., ಮೊತ್ತದ ಆರು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ ಪ್ರತಿನಿತ್ಯ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಗಮನಕ್ಕೆ ತಂದಿದ್ದು ಜ.2 ರಿಂದ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು. ಯುದ್ಧೋಪಾದಿಯಲ್ಲಿ ಕಾಮಗಾರಿಯನ್ನು ನಡೆಸಿ, ಮುಂದಿನ ನಾಲ್ಕೆ$ದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ ತಂದಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಜಿ.ಎಸ್​.ಬಸವರಾಜು, ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​, ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಮತ್ತಿತರರು ಹಾಜರಿದ್ದರು.

ಕತ್ತಲಲ್ಲಿಟ್ಟು ಸಹಾಯ ಮಾಡಬೇಡಿ

ಒಂದು ಜಿಲ್ಲೆಯನ್ನು ಕತ್ತಲೆ ಕೋಣೆಯಲ್ಲಿಟ್ಟು ಇನ್ನೊಬ್ಬರಿಗೆ ಸಹಾಯ ಮಾಡುವಂತಹ ಯಾವುದೇ ಯೋಜನೆಗಳು ಸಾಧುವಲ್ಲ. ಶಾಸಕ ಸುರೇಶ ಗೌಡ, ಎಂ.ಟಿ.ಕೃಷ್ಣಪ್ಪ, ಸೊಗಡುಶಿವಣ್ಣ ಎಲ್ಲರೂ ಈ ವಿಚಾರನ್ನು ಪ್ರಸ್ತಾಪಿಸಿದ್ದಾರೆ ಹೊರತು ಯಾರೊಬ್ಬರು ಯೋಜನೆಯ ತಾಂತ್ರಿಕ ಮಾಹಿತಿಯನ್ನು ಪೂರ್ಣವಾಗಿ ಕೊಟ್ಟಿಲ್ಲ. ಆದರೂ, ಸುರೇಶಗೌಡ ಹೇಳಿಕೆಗೆ (ಯೋಜನೆ ರದ್ದು ಪಡಿಸುವ) ನಾನು ಬದ್ಧನಾಗಿದ್ದೇನೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಮಾಧ್ಯಮಗಳ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಿಗೆ ಮತ್ತೆ ವಿನಂತಿ ಮಾಡುತ್ತೇನೆ. ಯೋಜನೆ ಸಾಧಕಬಾಧಕಗಳನ್ನು ನೋಡಿ ಯೋಜನೆ ಕೈಗೆತ್ತಿಕೊಳ್ಳಿ. ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿದ್ದಾಗ ಹಠಕ್ಕೆ ಬೀಳದೆ ಪುನರ್​ ಪರಿಶೀಲಿಸಿ ಹೆಜ್ಜೆಯಿಡಿ. ನೈಸರ್ಗಿಕವಾಗಿ ಕುಣಿಗಲ್​ಗೆ ಹೇಮೆ ನೀರು ಹರಿಯುತ್ತಿದೆ.ಜಿಲ್ಲೆಯ ರೈತರನ್ನು ತೊಂದರೆಗೆ ಸಿಲುಕಿಸಿ ನೀರು ತೆಗೆದುಕೊಂಡು ಹೋಗಲು ನನ್ನ ವಿರೋಧವಿದೆ ಎಂದು ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net