

ಅಳವಂಡಿ: ಜಗತ್ತಿಗೆ ದಾಸೋಹದ ಪರಿಕಲ್ಪನೆ, ಹೆಣ್ಣಿನ ಮಹತ್ವ ಹಾಗೂ ಸಮಾಜದ ಏಳಿಗೆ ಬಯಸಿದ ಮನುಕುಲದ ಸ್ತ್ರೀರತ್ನ, ಕಾಯಕ ತತ್ವವನ್ನು ಜಗತ್ತಿಗೆ ಸಾರಿದವರು ಹೇಮರಡ್ಡಿ ಮಲ್ಲಮ್ಮ ಎಂದು ಹೂವಿನಹಡಗಲಿ ಶ್ರೀ ಹಿರೇಶಾಂತವೀರ ಮಹಾಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಸ್ತ್ರೀ ಕುಲರತ್ನ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ
ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಶ್ರೀ ಈಶ್ವರ, ಹೇಮರಡ್ಡಿ ಮಲ್ಲಮ್ಮ ಹಾಗೂ ಭರಮ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೊಪ್ಪಳ ತಾಲೂಕು ಮಟ್ಟದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಹೇಮರಡ್ಡಿ ಮಲ್ಲಮ್ಮನ ಬೆಳ್ಳಿಮೂರ್ತಿ ಲೋಕಾರ್ಪಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೇ 21 ಹಾಗೂ 22 ರಂದು ಬೃಹತ್ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಜೀವನದಲ್ಲಿ ಉತ್ತಮ ಆಲೋಚನೆ ಹಾಗೂ ಹವ್ಯಾಸ ರೂಢಿಸಿಕೊಂಡರೆ ಸಾಧನೆಗೆ ಸಹಕಾರಿಯಾಗುತ್ತದೆ ಎಂದರು.
ಉಪನ್ಯಾಸಕ ಶಂಕರ ಬೆಟಗೇರಿ ಮಾತನಾಡಿ, ಕಾರ್ಯಕ್ರಮದ ಯಶಸ್ಸು ಸಾಧನೆಯಾಗಲಿದೆ. ತಾಲೂಕು ಮಟ್ಟದ ಕಾರ್ಯಕ್ರಮ ಆಗಿರುವುದರಿಂದ ಶಿಸ್ತುಬದ್ಧವಾಗಿ ಆಚರಿಸಬೇಕು ಎಂದರು.
ಪ್ರಮುಖರಾದ ಶಂಭುಲಿಂಗಯ್ಯ, ಪ್ರಶಾಂತ ಡಂಬಳ, ಶೇಖರಪ್ಪ, ನಿಂಗರಡ್ಡೆಪ್ಪ, ವೀರಣ್ಣ ಸಂಗರಡ್ಡಿ, ಚನಬಸಪ್ಪ, ಬಸವರಾಜ, ಮಲ್ಲಪ್ಪ, ಜಂಬನಗೌಡ ಗುಡಗೇರಿ, ವೀರನಗೌಡ, ಅಂದಪ್ಪ ರಕರಡ್ಡಿ, ಉಮೇಶ ಡಂಬಳ, ಅವಿನಾಶ, ಪ್ರವೀಣ, ರಾಕೇಶ, ಶಿವು, ಪ್ರಶಾಂತ, ಕಿರಣ, ವಿರೂಪಾಕ್ಷಪ್ಪ ಇತರರಿದ್ದರು.