ವಿಜಯವಾಣಿ ಸುದ್ದಿಜಾಲ ಗೋಗಿ
ಶಹಾಪುರ ತಾಲೂಕಿನ ಗೋಗಿ (ಕೆ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಡೆಂಘೆ ವಿರೋಧಿ ಮಾಸಾಚರಣೆ, ವಿಶ್ವ ಮೆದುಳು ದಿನ ಆಚರಣೆ ಹಾಗೂ ಆರೋಗ್ಯ ಮೇಳ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದವು.
ಜಿ¯್ಲÁಡಳಿತ, ಜಿಪಂ ಹಾಗೂ ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಗೋಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗೋಗಿ (ಪಿ) ಮತ್ತು ಗೋಗಿ (ಕೆ) ಗ್ರಾಪಂ ಅಧ್ಯಕ್ಷೆ ಸಹನಾ ರಾಜಶೇಖರ ಮತ್ತು ಸಾಬಮ್ಮ ಮೋನಪ್ಪ ಹೊಸಮನಿ ಉದ್ಘಾಟಿಸಿದರು.
ಜಿ¯್ಲÁ ಆರೋಗ್ಯ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಮಾತನಾಡಿ, ಸಾರ್ವಜನಿಕರು ಆರೋಗ್ಯ ಇಲಾಖೆಯ ಮಾಹಿತಿ ಪಡೆದು ಪರಿಸರ ಸ್ವಚ್ಛವಾಗಿರಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಬೇಕೆಂದು ಹೇಳಿದರು.
ಶಹಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ಜಿ¯್ಲÁ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಸಾಜೀದ್, ಜಿ¯್ಲÁ P್ಷÀಯರೋಗ ನಿರ್ಮೂಲನಾಧಿಕಾರಿ ಡಾ.ಸಂಜೀವಕುಮಾರ, ಜಿ¯್ಲÁ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಕಟ್ಟಿಮನಿ, ಮನೋವೈದ್ಯ ಡಾ.ಅಮಿತ್ ಮಾತನಾಡಿದರು.ಅಂಗನವಾಡಿ ಮೇಲ್ವಿಚಾರಕಿ ವಿದ್ಯಾಶ್ರೀ, ಪ್ರಮುಖರಾದ ಶಾಂತಿಲಾಲ್,ಬಸವರಾಜ, ಮಹಾಲಕ್ಷಿö್ಮ,ಸುದರ್ಶನ, ಈರಣ್ಣ ಹೊಸಮನಿ, ಶರಣಪ್ಪ ತಳವಾರ, ಕಲ್ಯಾಣ ಶೆಟ್ಟಿ, ಪರಮೇಶ್ವರ, ಮಲ್ಲಪ್ಪ ಕಾಂಬಳೆ ಉಪಸ್ಥಿತರಿದ್ದರು.