ಸೃಜನಶೀಲತೆಗೆ ಹೊಸ ಆಯಾಮ ಕಂಡುಕೊಳ್ಳಲು ಸಹಕಾರಿ

kota.me.8 sahithya.p
Published on

ಕೋಟ: ತಿಂಗಳಿಗೊಮ್ಮೆ ಬರಹಗಾರರೆಲ್ಲ ಒಟ್ಟಿಗೆ ಸೇರಿ ತಾವು ಬರೆದ ಕಥೆ, ಕವನ ವಾಚನ, ಗೀತ ಗಾಯನ, ಕಿರಿದಾದ ಹಾಸ್ಯ ಲೇಖನ, ಪ್ರಸ್ತುತ ಸಮಸ್ಯೆ ಮತ್ತು ಪರಿಹಾರದ ಬರಹಗಳ ಮೂಲಕ ತಮ್ಮ ಸೃಜನಶೀಲತೆಗೆ ಹೊಸ ಆಯಾಮ ಕಂಡುಕೊಳ್ಳಲು ಇಂಥ ಕಾರ್ಯಕ್ರಮ ನಡೆಸುತ್ತಿರುವುದು ಉತ್ತಮ ಪ್ರಯತ್ನ ಎಂದು ಹಿರಿಯ ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ ಅಭಿಪ್ರಾಯಪಟ್ಟರು.

ಇತ್ತೀಚಿಗೆ ಕೋಟ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೋಟ ಮಿತ್ರ ಮಂಡಳಿ ಆಯೋಜಿಸಿದ್ದ ‘ನಂನಮ್ಮೊಳಗೆ ಸಾಹಿತ್ಯಾವಲೋಕನ’ ಕಾರ್ಯಕ್ರಮದಲ್ಲಿ ವಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸುವ್ರತಾ ಅಡಿಗ, ಶ್ರೀದೇವಿ ಹಂದೆ, ಡಾ.ಉಮೇಶ್ ಭಟ್, ಕುಚ್ಚೂರು ಜಿ.ಲಕ್ಷ್ಮೀ, ಕೆ.ಪುಂಡಲೀಕ ನಾಯಕ್, ಮುಂಜುನಾಥ ಮರವಂತೆ, ಮುಕಾಂಬಿಕಾ ಮಯ್ಯ, ಸೂರ್ಯನಾರಾಯಣ ಚಿತ್ರಪಾಡಿ, ಭಾರತಿ ವಿ.ಮಯ್ಯ, ಸುಮನಾ ಹೇರ್ಳೆ, ನಾಗೇಶ್ ಮಯ್ಯ, ಶ್ರೀಕೃಷ್ಣ ಅಹಿತಾನಲ, ಗಣೇಶಮೂರ್ತಿ ಹೆಬ್ಬಾರ್, ಸೋಮಶೇಖರ್ ಶೆಟ್ಟಿ ಗಿಳಿಯಾರ್ ತಾವು ಬರೆದ ಕಥೆ, ಪುಸ್ತಕ , ಅನುಭವ ಕಥನ, ಗೀತ ಗಾಯನ, ಕಿರು ಲೇಖನ ಮಂಡಿಸಿದರು.

ಲೇಖಕ ಮರವಂತೆ ಮಂಜುನಾಥ ವಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮಿತ್ರ ಮಂಡಳಿ ಅಧ್ಯಕ್ಷ ಪ್ರೊ.ಉಪೇಂದ್ರ ಸೋಮಯಾಜಿ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮನೋಹರ ಪಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net