ಸಂಘ ಸಂಸ್ಥೆಗಳ ಚಟುವಟಿಕೆ ಅಭಿವೃದ್ಧಿಗೆ ಸಹಕಾರಿ

byn (5)
Published on

ಬೈಂದೂರು: ಶಿರೂರಿನಂತಹ ಗ್ರಾಮೀಣ ಭಾಗದಲ್ಲಿ ಯುವಶಕ್ತಿ ಗಣೇಶೋತ್ಸವ ಸಮಿತಿ ಕಳೆದ 27 ವರ್ಷಗಳಿಂದ ಸಂಟಿತಗೊಂಡು ಧಾರ್ಮಿಕ, ಸಾಂಸ್ಕೃತಿ ಹಾಗೂ ಸಾವಾಜಿಕ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುತ್ತಿದೆ. ಸಂ ಸಂಸ್ಥೆಗಳ ಕ್ರಿಯಾತ್ಮಕ ಚಟುವಟಿಕೆಗಳು ಊರಿನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಬೆಂಗಳೂರು ಉದ್ಯಮಿ ಗೋವಿಂದರಾಜ್ ಹೇಳಿದರು.

ಶಿರೂರು ಕರಾವಳಿ ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿಯ 27ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಚೇತನ ರಾಮ ಬಿಲ್ಲವ, ದೀಕ್ಷಾ ಆನಂದ ಮೊಗೇರ್ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಚೈತ್ರಾ ದಿನಕರ ಬಿಲ್ಲವ, ವಂದನಾ ಕೃಷ್ಣ ಬಿಲ್ಲವ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ನಾಗಮ್ಮ ಪೂಜಾರ್ತಿ ಹಾಗೂ ಯುವಶಕ್ತಿಗೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಸಮಿತಿ ಗೌರವಾಧ್ಯಕ್ಷ ಭಾಸ್ಕರ ಮೊಗೇರ್, ಅಧ್ಯಕ್ಷ ಯಶವಂತ ಬಿಲ್ಲವ, ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್, ನಿವೃತ್ತ ಶಿಕ್ಷಕ ವಾಧವ ಬಿಲ್ಲವ ಕಾಳನಮನೆ, ಮುಖ್ಯ ಶಿಕ್ಷಕ ಮಹಾದೇವ ಬಿಲ್ಲವ, ವಾಜಿ ಗೌರವಾಧ್ಯಕ್ಷ ವಾಸು ಬಿಲ್ಲವ ತೆಂಕಮನೆ, ಅಣ್ಣಪ್ಪ ಮೊಗೇರ್, ರವಿದಾಸ್ ಮೊಗೇರ್, ಹೆರಿಯಣ್ಣ ವಾಸ್ಟರ್, ನಾಗಪ್ಪ ಬಿಲ್ಲವ ಜಟ್ಟಜ್ಜಿಮನೆ, ನಾಗಪ್ಪ ಬಿಲ್ಲವ ಮಂಗಳುಮನೆ, ಜಲಜಾಕ್ಷಿ ಬೆಂಗಳೂರು, ಉಪ ಕಾರ್ಯದರ್ಶಿ ಗಿರೀಶ್ ಮೊಗೇರ್, ಆನಂದ ಮೊಗೇರ್ ಇದ್ದರು.

ಯುವಶಕ್ತಿ ವಾಜಿ ಅಧ್ಯಕ್ಷ ಅರುಣ್ ಕುವಾರ್ ಪ್ರಾಸ್ತಾವಿಸಿದರು. ವಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಬಿಲ್ಲವ ಚಂಬಿತ್ಲು ವಂದಿಸಿದರು. ಮಹೇಂದ್ರ ಬಿಲ್ಲವ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net