

ಬೈಂದೂರು: ನಮ್ಮ ಸನಾತನ ಧರ್ಮದ ಭವ್ಯ ಪರಂಪರೆಯ ತಿರುಳನ್ನು ಅರಿತು, ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿದ ಸಂಸ್ಕಾರ, ಆಚರಣೆಗಳನ್ನು ಕ್ರಮದಂತೆ ಪಾಲಿಸಬೇಕು. ನಮ್ಮ ಧರ್ಮದ ಎಲ್ಲ ಆಚರಣೆಗಳನ್ನು ಹಿಂದಿನಂತೆ ಕ್ರಮವತ್ತಾಗಿ ವಾಡುವುದರ ಮೂಲಕ ಮುಂದಿನ ನಮ್ಮ ಪೀಳಿಗೆಗೆ ಅವುಗಳನ್ನು ಧಾರೆ ಎರೆಯುವ ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದು ಪುರೋಹಿತ ಕೆರೆಕಟ್ಟೆಯ ಸುಬ್ರಹ್ಮಣ್ಯ ಅಡಿಗ ಹೇಳಿದರು.
ನಾವುಂದ ಹಿಂದು ಅಭ್ಯುದಯ ಸಂ ವತಿಯಿಂದ ನಡೆಯುತ್ತಿರುವ 45ನೇ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ವಾತನಾಡಿದ ಉದ್ಯಮಿ ಜಗದೀಶ ಶೆಟ್ಟಿ ಕುದ್ರುಕೋಡು, ನಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ವಾಡಿಕೊಂಡು, ತಮ್ಮ ಸ್ವಂತಿಕೆಯಿಂದ ಸಾಧನೆ ವಾಡಿ, ಸವಾಜದಲ್ಲಿ ಗುರುತಿಸಲ್ಪಡಬೇಕು ಎಂದರು.
ಸಂದ ಅಧ್ಯಕ್ಷ ಶಶಿಧರ ಎಂ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅನಾರೋಗ್ಯ ಪೀಡಿತ ಮೂವರಿಗೆ ಸಂ ವತಿಯಿಂದ ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಧಾನ ಅರ್ಚಕ ರಾವೇಂದ್ರ ಕಾರಂತ, ಸಂ ಉಪಾಧ್ಯಕ್ಷ ಪ್ರವೀಣ್ ಪೂಜಾರಿ, ನಾವುಂದ ಮಹಾಗಣಪತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅಭಿಷೇಕ್ ಉಪಸ್ಥಿತರಿದ್ದರು.
ಸಂ ಸದಸ್ಯ ಎನ್.ಸಂಜೀವ ಗಾಣಿಗ ಸ್ವಾಗತಿಸಿದರು. ಕೋಶಾಧಿಕಾರಿ ರತ್ನಾಕರ ಕೆ. ವಂದಿಸಿದರು. ಕಾರ್ಯದರ್ಶಿ ಎ.ಶಿವರಾಮ ಮಧ್ಯಸ್ಥ ನಿರೂಪಿಸಿದರು.