

ದೇವದುರ್ಗ: ಅಮೃತಕ್ಕೆ ಸಮನಾದ ತಾಯಿಹಾಲು ಮಗು ಹುಟ್ಟಿದ ದಿನದಿಂದ ಆರು ತಿಂಗಳವರೆಗೆ ಕಡ್ಡಾಯವಾಗಿ ನೀಡಬೇಕು ಎಂದು ಟಿಎಚ್‌ಒ ಡಾ.ಬನದೇಶ್ವರ ಹೇಳಿದರು.
ಇದನ್ನೂ ಓದಿ:ವಿಶ್ವ ಸ್ತನ್ಯಪಾನ ಸಪ್ತಾಹ ಮಾಹಿತಿ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆರಿಗೆಯಾಗಿ ಅರ್ಧ ಗಂಟೆಯೊಳಗೆ ತಾಯಿ ಮಗುವಿಗೆ ಹಾಲುಣಿಸಬೇಕು. ಮೊದಲ ಮೂರು ದಿನ ಬರುವ ತಾಯಿ ಹಾಲಿನಲ್ಲಿ ಕೊಲೆಸ್ಟ್ರಾಲ್ ಅಂಶವಿದ್ದು, ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. 6 ತಿಂಗಳವರೆಗೆ ಮಾತ್ರ ತಾಯಿಹಾಲು ಕುಡಿಸಬೇಕು. ದಿನಕ್ಕೆ 12ಬಾರಿ ಹಾಲು ಕುಡಿಸಬೇಕು. 6 ತಿಂಗಳಿನ ನಂತರ ಎರಡು ವರ್ಷದವರೆಗೂ ಮಗುವಿಗೆ ಪೂರಕ ಆಹಾರದೊಂದಿಗೆ ತಾಯಿಹಾಲು ನೀಡಬೇಕು. ಇದು ಮಗುವಿಗೆ ದೈಹಿಕ ಬೆಳೆವಣಿಗೆ ವೃದ್ಧಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಸ್ತಮಾ, ವಾಂತಿಭೇದಿ ಸೇರಿ ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ. ಜತೆಗೆ ತಾಯಿ ಮಗುವಿನ ಬಾಂಧವ್ಯಕ್ಕೆ ಸಹಕಾರಿಯಾಗಲಿದೆ. ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ದೂರವಿರಬಹುದು ಎಂದ ಅವರು, ‘ತಾಯಿಯ ಹಾಲು ನೀಡುವಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ’ ಇದು ಈ ವರ್ಷದ ಘೋಷವಾಕ್ಯ ಎಂದು ತಿಳಿಸಿದರು.
ಮಕ್ಕಳ ತಜ್ಞ ಡಾ.ಶಿವಕುಮಾರ್ ದೇಸಾಯಿ, ವೈದ್ಯಾಧಿಕಾರಿ ಡಾ.ನಿರ್ಮಲಾ ದೇವಿ, ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಆಶಾ ಕಾರ್ಯಕರ್ತೆಯರಾದ ದೀಪಾ, ದೀಪಿಕಾ, ಶಾಂತಮ್ಮ, ನಾಗಮ್ಮ, ಸುಜಾತಾ, ಶ್ರುತಿ, ರೇಣುಕಾ, ತಾಯಮ್ಮ, ಸುಮಂಗಲಾ, ಸುಮಿತ್ರಾ, ರಹಿಮ್ಯುನಿಷಾ, ಶಬೀನಾ, ಭೀಮಮ್ಮ, ಶಿವಗಂಗಾ, ರೇಖಾ, ಪ್ರಮುಖರಾದ ಗೀತಮ್ಮ, ಚನ್ನಬಸಯ್ಯ ಹಿರೇಮಠ, ಸೋಮಪ್ಪ, ಚಂದ್ರಮಪ್ಪ ಇತರರಿದ್ದರು.