ಹೆಜ್ಜೇನು ದಾಳಿ, ಐವರು ಆಸ್ಪತ್ರೆಗೆ

New Project (72)
Published on

ಗುರುಪುರ: ಇಲ್ಲಿನ ಮಠದಬೈಲಿನಲ್ಲಿ ಬುಧವಾರ ಬೆಳಗ್ಗೆ ನಾಲ್ಕೈದು ಮಂದಿಯ ಮೇಲೆ ಹೆಜ್ಜೇನು ದಾಳಿ ವಾಡಿದೆ.

ಬೇಬಿ ಯಾನೆ ಸರೋಜ, ಗಣೇಶ್ ಕೊಟ್ಟಾರಿ, ಶೋಧನ್ ಗಂಭೀರ ಗಾಯಗೊಂಡಿದ್ದು, ಉಳಿದ ಇಬ್ಬರು ಅಲ್ಪಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗಂಭೀರ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಬೇಬಿ ಅವರು ಮನೆಯಂಗಳದಲ್ಲಿದ್ದ ವೇಳೆ ಹೆಜ್ಜೇನು ಗುಂಪೊಂದು ದಾಳಿ ವಾಡಿದ್ದು, ಅವರು ರಸ್ತೆಗೆ ಓಡಿ ಬಂದಾಗ, ನೆರವಿಗೆ ಬಂದ ಗಣೇಶ್ ಎಂಬುವರೂ ದಾಳಿಗೊಳಗಾದರು. ಹೆಜ್ಜೇನು ಗುಂಪಿನಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲೇ ಓಡುತ್ತಿದ್ದಾಗ ಅವರ ನೆರವಿಗೆ ಬಂದ ಶೋಧನ್ ಎಂಬುವರ ಮೇಲೂ ದಾಳಿ ವಾಡಿದೆ. ಗಣೇಶ್ ರೈನ್‌ಕೋಟ್ ಹಾಕಿ ತಪ್ಪಿಸಿಕೊಂಡರೆ, ಮನೆಯೊಂದರ ಬಳಿ ಓಡಿದ್ದ ಶೋಧನ್ ಮೈಮೇಲೆ ನೀರು ಎರಚಿಕೊಂಡು ಬಚಾವ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net