

ಕಾಸರಗೋಡು: ಹೊಸದುರ್ಗ ಕಳತ್ತಿಂಗಾಲ್‌ನಲ್ಲಿ ಅನಧಿಕೃತವಾಗಿ ದಾಸ್ತಾನಿರಿಸಿದ್ದ 130 ಕಿ.ಗ್ರಾಂ ಶ್ರೀಗಂಧದ ಕೊರಡನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಕಳತ್ತಿಂಗಾಲ್ ನಿವಾಸಿ ಪ್ರಸಾದ್ ಹಾಗೂ ಈತನ ಸಹಚರ ಮೂನಾಮೈಲ್ ನಿವಾಸಿ ಶಿಬುರಾಜ್ ಬಂಧಿತರು. ಕೊಠಡಿಯೊಂದರಲ್ಲಿ ದಾಸ್ತಾನಿರಿಸಿದ್ದ ಶ್ರೀಗಂಧವನ್ನು ಎರಡು ಕಾರುಗಳಲ್ಲಿ ಸಾಗಿಸಲು ಪ್ರಯತ್ನ ನಡೆಯುತ್ತಿದ್ದಾಗ ಹೊಸದುರ್ಗ ಪ್ಲೈಯಿಂಗ್ ಸ್ಕ್ವೇಡ್ ರೇಂಜ್ ಅರಣ್ಯಾಧಿಕಾರಿ ವಿ.ರತೀಶನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.