ಪ್ರಗತಿ ಹಾದಿಯಲ್ಲಿ ಹೆಡತಲೆ ಹಾಲು ಉತ್ಪಾದಕರ ಸಹಕಾರ ಸಂಘ

4
????????????
Published on

ನಂಜನಗೂಡು: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಡೆದಿರುವ ಲಾಭ-ನಷ್ಟಗಳನ್ನು ಸಂಘದ ಸದಸ್ಯರಿಗೆ ತಿಳಿಸಲು ಪ್ರತಿ ವರ್ಷ ಸದಸ್ಯರ ಸಭೆ ನಡೆಸಲಾಗುತ್ತದೆ ಎಂದು ಮೈಮುಲ್ ನಿರ್ದೇಶಕಿ ನೀಲಾಂಬಿಕೆ ಮಹೇಶ್ ತಿಳಿಸಿದರು.


ತಾಲೂಕಿನ ಹೆಡತಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿರುವುದು ಆಡಿಟ್ ವರದಿಯಲ್ಲಿ ತಿಳಿದು ಬಂದಿದೆ. ಇದಕ್ಕೆ ಮುಖ್ಯ ಕಾರಣ ಎಲ್ಲರ ಸಹಕಾರ. ಈ ವರ್ಷ ಮೈಸೂರು ಹಾಲು ಒಕ್ಕೂಟದಲ್ಲಿ ಹಾಲು ಶೇಖರಣೆ ಅಧಿಕವಾಗಿದ್ದ ಕಾರಣ ರೈತರಿಗೆ ಹಲವು ಸಲಕರಣೆಗಳು ತಲುಪಿಸಲು ಸಾಧ್ಯವಾಗಲಿಲ್ಲ. ಒಕ್ಕೂಟದಿಂದಲೇ ಒಂದು ತಿಂಗಳ ಹಾಲಿನ ಹಣ ಬಾಕಿ ಇದೆ. ಆದರೂ ಸಂಘವು ಉತ್ತಮವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.


ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಾದ ನಿಂಗರಾಜನಾಯಕ, ನಂಜನಾಯ್ಕ, ಸಾಕಮ್ಮ ಅವರನ್ನು ಸನ್ಮಾನಿಸಲಾಯಿತು.


ಸಂಘದ ಅಧ್ಯಕ್ಷ ಕೆ.ನಾಗರಾಜು, ಸಹಾಯಕ ಉಪ ವ್ಯವಸ್ಥಾಪಕ ಅಕ್ಷಯ್ ಕುಮಾರ್, ವಿಸ್ತರಣಾಧಿಕಾರಿ ಡಾ.ರಮ್ಯಾ, ನಿರ್ದೇಶಕರಾದ ಮಹದೇವನಾಯಕ, ರಾಜನಾಯ್ಕ, ದೊರೆಸ್ವಾಮಿ ನಾಯಕ, ಸಿದ್ದನಾಯಕ, ಚಂದ್ರನಾಯಕ, ನಾಗಶೆಟ್ಟಿ, ಮಂಜು, ಚಿನ್ನಸ್ವಾಮಿ, ಮಂಗಳಮ್ಮ, ಪುಷ್ಪಲತಾ, ಕಾರ್ಯದರ್ಶಿ ಎಚ್.ಎಂ.ದೊರೆಸ್ವಾಮಿ, ಹಾಲು ಪರೀಕ್ಷಕ ನಾಗೇಂದ್ರ, ಸಹಾಯಕ ರವಿ, ಷೇರುದಾರರು, ಉತ್ಪಾದಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net