

ಹೆಬ್ರಿ: ಲೋಕಕಲ್ಯಾಣಾರ್ಥವಾಗಿ ಹೆಬ್ರಿ ಶ್ರೀ ಅನಂತಪದ್ಮನಾಭ ಪಾದಯಾತ್ರಾ ಸಮಿತಿ ವತಿಯಿಂದ ತಾಲೂಕಿನ ವಿಪ್ರರಿಂದ ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು.
ಪಾದಯಾತ್ರೆಯ ಹಾದಿಯುದ್ದಕ್ಕೂ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಕೃಷ್ಣಾಷ್ಟೋತ್ತರಶತನಾಮ ಸ್ತೋತ್ರ, ಶ್ರೀ ವೆಂಕಟೇಶಸ್ತೋತ್ರ, ಶ್ರೀ ರಾಮ ತಾರಕ ಮಂತ್ರ, ಭಕ್ತಿಗೀತೆ ಹಾಗೂ ದೇವರ ನಾಮಾವಳಿಯನ್ನು ಪಠಿಸಿದರು.
ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಹಾಗೂ ಹೆಬ್ರಿ ಸುದರ್ಶನ್ ಜೋಯಿಸ್ ಅವರು ಉಸ್ತುವಾರಿ ವಹಿಸಿದ್ದರು. ರಾಘವೇಂದ್ರ ಭಟ್ ದುಗ್ಗೋಡು ಉಪ್ಪಳ, ವೆಂಕಟರಮಣ ಕಲ್ಕೂರ್ ಉಪ್ಪಳ, ನಿತ್ಯಾನಂದ ಭಟ್ ಹೆಬ್ರಿ, ಪ್ರಕಾಶ್ ಭಟ್ ಹೆಬ್ರಿ, ಗಿರೀಶ್ ಭಟ್ ಶಿವಪುರ, ಪ್ರಶಾಂತ್ ಭಟ್ ದೊಡ್ಡಬಳ್ಳಾಪುರ, ಅಮೋಘ ಭಟ್ ಮುದ್ರಾಡಿ, ವಿದ್ಯಾಲಕ್ಷ್ಮೀ ಆಚಾರ್ಯ ಗಿಲ್ಲಾಳಿ, ರಮ್ಯಾ ಭಟ್ ಬಲ್ಲಾಡಿ, ಶ್ರೀಮತಿ ಕಲ್ಕೂರ್ ಉಪ್ಪಳ, ಶ್ರೀನಿಧಿ ಕಲ್ಕೂರ್ ಉಪ್ಪಳ, ಕಾವ್ಯ ಭಟ್ ಹೆಬ್ರಿ, ಇಂಪನಾ ಭಟ್ ಬಲ್ಲಾಡಿ ಪಾಲ್ಗೊಂಡಿದ್ದರು.