ಹೆಬ್ರಿ ಶಾರದಾ ಮಹೋತ್ಸವ ಸಂಪನ್ನ

shobhayatre
ಶೋಭಾ ಯಾತ್ರೆಯಲ್ಲಿ ಕಂಗೊಳಿಸುತ್ತಿರುವ ಶಾರದಾ ಮಾತೆ.
Published on

ಹೆಬ್ರಿ: ಹೆಬ್ರಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ನಡೆದ 14ನೇ ವರ್ಷದ ಶಾರದಾ ಮಹೋತ್ಸವ ಸಂಪನ್ನ ಸಂಪನ್ನಗೊಂಡಿತು. ಅರ್ಚಕ ಗಿಲ್ಲಾಳಿ ಪದ್ಮನಾಭ ಆಚಾರ್ಯ ಮಾತನಾಡಿದರು.

ಮಹಾಪೂಜೆ ಬಳಿಕ ಚೆಂಡೆ, ಭಜನೆ, ಕಲಾ ತಂಡಗಳ ಆಕರ್ಷಕ ವೇಷಭೂಷಣಗಳ ಜತೆಗೆ ಶಾರದಾ ಮಾತೆಯ ಪುರಮೆರವಣಿಗೆ ನಡೆಯಿತು. ಹೆಬ್ರಿ ರಾಮ ಮಂಟಪದ ಬಳಿಯ ಕೆರೆಯಲ್ಲಿ ಜಲಸ್ತಂಭನ ನಡೆಯಿತು.

ಹೆಬ್ರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀದತ್ತ ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ನಾಯ್ಕ ಚಾರ, ಪೂರ್ವಾಧ್ಯಕ್ಷ ಎಚ್.ವಾದಿರಾಜ ಶೆಟ್ಟಿ, ನವೀನ್ ಕೆ.ಅಡ್ಯಂತಾಯ, ಉಪಾಧ್ಯಕ್ಷ ಹರ್ಷ ಶೆಟ್ಟಿ, ಮಹಿಳಾ ವಿಭಾಗದ ಸುಮಾ ಎನ್.ಅಡ್ಯಂತಾಯ, ಸುಜಾತಾ ಹರೀಶ ಪೂಜಾರಿ, ಸುಕೇಶ ಶೆಟ್ಟಿ, ವಿಜಯ ಪೂಜಾರಿ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಿ ಟಿ.ಜಿ.ಆಚಾರ್ಯ ನಿರೂಪಿಸಿದರು. ಸೀತಾನದಿ ಶೋಧನ್ ಶೆಟ್ಟಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net