

ಕಾರವಾರ: ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್4ಎ ದಲ್ಲಿ ಜೊಯಿಡಾ ತಾಲೂಕಿನ ಅನಮೋಡ ಘಟ್ಟ 6 ಚಕ್ರದ ವಾಹನ ಹಾಗೂ ಅದಕ್ಕಿಂತ ದೊಡ್ಡ ವಾಹನಗಳನ್ನು ಸೆ.30 ರವರೆಗೆ ನಿಷೇಽಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಗುರುವಾರ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ಎ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ರಾತ್ರಿ 7 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಭಾರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಈಗ ಭಾರಿ ಮಳೆಯಿಂದ ಅಸೋಲಿ ಬ್ರಿಜ್, ಬರಲಕೋಡ ರೈಲ್ವೆ ಗೇಟ್ ಹತ್ತಿರ, ದೇವಳ್ಳಿ ಗ್ರಾಮದ ರೈಲ್ವೆ ಗೇಟ್ ಹತ್ತಿರ, ದೇವಳ್ಳಿ ಕ್ರಾಸ್ ಸಮೀಪ ಜಳಕಟ್ಟಿ ನರ್ಸರಿ ಸಮೀಪ, ಜಳಕಟ್ಟಿ ಗ್ರಾಮದ ಸಮೀಪ, ಮಾರುತಿ ದೇವಸ್ಥಾನ ಸಮೀಪ, ಮಾರುತಿ ದೇವಸ್ಥಾನದಿಂದ 1 ಕಿಮೀ ದೂರದಲ್ಲಿ ಕ್ಯಾಸಲ್‌ರಾಕ್ ಸಮೀಪ, ಹಾತಿ ಬ್ರಿಜ್ ಸೇರಿ ವಿವಿಧ ಬ್ರಿಜ್‌ಗಳು ಶಿಥಿಲಾವಸ್ಥೆಯಲ್ಲಿವೆ. ರಸ್ತೆ ಹಾಳಾಗಿದೆ. ಇದರಿಂದ ಎರಡೂ ಕಡೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ.
ಇದರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ಎಂದರೆ ಸೆಪ್ಟೆಂಬರ್ 30 ರವರೆಗೆ ಭಾರಿ ವಾಹನಗಳನ್ನು ನಿಷೇಧಿಸಿ ಡಿಸಿ ಆದೇಶ ಮಾಡಿದ್ದಾರೆ. ಧಾರವಾಡದಿಂದ ಸಂಚರಿಸುವ ವಾಹನಗಳು ಅಳ್ನಾವಳ-ಹಳಿಯಾಳ-ಯಲ್ಲಾಪುರ ಮಾರ್ಗವಾಗಿ, ಬೆಳಗಾವಿಯಿಂದ ಸಂಚರಿಸುವ ವಾಹನಗಳು ಚೊರ್ಲಾ ಘಾಟ್ ಮಾರ್ಗವಾಗಿ ಗೋವಾಕ್ಕೆ ಸಾಗಬಹುದು ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ರಾಮನಗರ-ಗೋವಾ ನಡುವೆ ಅಸೋಲಿ ಬ್ರಿಜ್ ಬಳಿ ನೀರು ನಿಂತಿದ್ದರಿAದ ಕಳೆದ ಎರಡು ದಿನಗಳಿಂದ ವಾಹನಗಳ ಓಡಾಟ ಸಾಧ್ಯವಾಗದೇ ಸಾಕಷ್ಟು ಸಮಸ್ಯೆ ಉಂಟಾಗಿತ್ತು.