ಬೈಲಹೊಂಗಲದಲ್ಲಿ ಭಾರಿ ಮಳೆ, ಗಾಳಿ

7blh9 ಭಾರೀ ಮಳೆ
Published on

ಬೈಲಹೊಂಗಲ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬಿಸಿಲಿನಿಂದ ಬಸವಳಿದ ಜನರಿಗೆ ಬುಧವಾರ ಸುರಿದ ಮಳೆ ತಂಪೆರೆಯಿತು.

ಗಾಳಿಯಿಂದ ಗಿಡ&ಮರ, ವಿದ್ಯುತ್​ ಕಂಬಗಳು ಧರೆಗುರುಳಿವೆ. ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸುಮಾರು 1ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.

ಪಟ್ಟಣದ ಶಾಸಕರ ನಿವಾಸಿದ ಗೇಟ್​ ಬಳಿ ಮರವೊಂದು ಧರೆಗುರುಳಿದಿದೆ. ಹೊಸೂರ ರಸ್ತೆಯ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ಬಳಿ ಮರ ಹಾಗೂ ವಿದ್ಯುತ್​ ಕಂಬ ಧರೆಗುರುಳಿ, ಸಂಚಾರಕ್ಕೆ ಅಡಚಣೆ ಉಂಟಾಯಿತು.

ಅದೃಷ್ಟಾವಶಾತ್​ ಬಾರಿ ಅನಾಹುತ ತಪ್ಪಿದೆ. ತಣ ಎಚ್ಚೆತ್ತ ಸ್ಥಳಿಯರು ಕರೆ ಮಾಡಿ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್​ ಕಡಿತಗೊಳಿಸಿ ಕಂಬ ಹಾಗೂ ಮರ ತೆರುವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net