ಯಲ್ಲಾಪುರ ಭಾಗದಲ್ಲಿ ಭಾರಿ ಮಳೆ, ಮಾರುತಿ ದೇವಸ್ಥಾನಕ್ಕೆ ನುಗ್ಗಿದ ನೀರು

26 ylp 03 a (tota)
Published on

ಯಲ್ಲಾಪುರ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಗಾಳಿಮಳೆಯ ಅಬ್ಬರಕ್ಕೆ ಹಲವೆಡೆ ಹಾನಿ ಉಂಟಾಗಿದೆ. ಶನಿವಾರ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಶುಕ್ರವಾರ ಸಂಜೆಯ ಗಾಳಿ- ಮಳೆ ತಾಲೂಕಿನ ಉಪಳೇಶ್ವರ, ಹುತ್ಕಂಡ, ಆನಗೋಡ, ಇಡಗುಂದಿ, ಕವಡಿಕೆರೆ, ಕುಂದರಗಿ, ಹಿತ್ಲಳ್ಳಿ, ಮಂಚಿಕೇರಿ ಸೇರಿ ಬಹುತೇಕ ಭಾಗಗಳಲ್ಲಿ ಅವಾಂತರ ಸೃಷ್ಟಿಸಿದೆ. ಹಳ್ಳದ ನೀರು ತೋಟ- ಗದ್ದೆಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಪಟ್ಟಣದ ಜೋಡುಕೆರೆ ಬಳಿ ಇರುವ ಮಾರುತಿ ದೇವಸ್ಥಾನಕ್ಕೆ ಕೆರೆಯ ನೀರು ನುಗ್ಗಿದೆ. ಶನಿವಾರ ಮಾರುತಿಗೆ ಪೂಜೆ ಸಲ್ಲಿಸಲು ಬಂದ ಭಕ್ತರು ನೀರು ಹೊರಹಾಕಲು ಶ್ರಮಿಸಿದರು.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನತೆ ಹೆಸ್ಕಾಂನ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net