

ಗೋಣಿಕೊಪ್ಪ: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನಲ್ಲಿ ಗುರುವಾರ ಭಾರಿ ಮಳೆ ಸುರಿದಿದೆ.
ಪೊನ್ನಂಪೇಟೆ, ಕುಟ್ಟ, ಬಿರುನಾಣಿ, ಟಿ.ಶೆಟ್ಟಿಗೇರಿ, ಹುದಿಕೇರಿ, ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಲಕ್ಷ್ಮಣತೀರ್ಥ ನದಿ ಉಕ್ಕಿ ಶ್ರೀಮಂಗಲ, ನಾಲಿಕೇರಿ ರಸ್ತೆಯಲ್ಲಿ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.
ಬಿರುನಾಣಿ ಹುದಿಕೇರಿ ರಸ್ತೆಯ ನಡುವೆ ಹೈಸೊಡ್ಲೂರು ಪೊರಾಡು ಸೇತುವೆ ಬಳಿ ಬರೆ ಕುಸಿತ ಉಂಟಾಗಿ, ಅರ್ಧ ಭಾಗ ರಸ್ತೆಯನ್ನು ಆವರಿಸಿದೆ. ಕೋಣಗೇರಿ ಗ್ರಾಮದ ಕಾಡ್ಯಮಾಡ ಕಿರಣ್ ಎಂಬುವವರ ಮನೆ ಹಿಂಬದಿ ಬರೆ ಕುಸಿದು ಹಾನಿಯಾಗಿದೆ.