1 ಗಂಟೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಕೆರೆಯಂತಾದ ಬಸ್​ ನಿಲ್ದಾಣ!ಬಸ್ಸಿಗಾಗಿ ಪರದಾಡಿದ ಪ್ರಯಾಣಿಕರು

Mandyabusstaion
Published on

ಮಂಡ್ಯ: ಸತತ ಒಂದು ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ KSRTC ಬಸ್ ನಿಲ್ದಾಣ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿದೆ.

ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಬಸ್​ ಸಂಚಾರಕ್ಕೆ ಅಡ್ಡಿಯಾಗಿದ್ದು, ಮಳೆನೀರು ತುಂಬಿಕೊಂಡಿದ್ದರಿಂದ ಬಸ್​ ಹತ್ತಲು ಜನರು ಪರದಾಡುವಂತಾಯಿತು.

ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ. ಕೆ.ಆರ್​.ಪೇಟೆ ನಿಲ್ದಾಣ ಮಾತ್ರ ಕೆಲಕಾಲ ಬಸ್​ ನಿಲ್ದಾಣವೋ ಅಥವಾ ಕೆರೆಯೋ ಎಂಬಂತೆ ಭಾಸವಾಗಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net