

ಕೊಡಗು: ಜಿಲ್ಲೆಯ ಹಲವು ಭಾಗಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯುತ್ತಿದೆ.
ಸಿದ್ದಾಪುರ, ಕುಶಾಲನಗರ,ವೀರಾಜಪೇಟೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಧ್ಯಾಹ್ನದ ಬಳಿಕವಂತೂ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ.
ಕಳೆದ ಕೆಲದಿನಗಳಿಂದ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಇನ್ನು ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.
ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿದ ಅನಾಹುತ ಒಂದೆರಡರಲ್ಲ. ಈ ಬಾರಿ ಮೇ ಆರಂಭದಲ್ಲೇ ಮಳೆ ಪ್ರಾರಂಭವಾಗಿದ್ದು, ಇನ್ಯಾವ ಗಂಡಾಂತರ ಸೃಷ್ಟಿಯಾಗುತ್ತದೆಯೋ ಎಂದು ಇಲ್ಲಿನ ಜನರು ಆತಂಕಪಡುವಂತಾಗಿದೆ.