ಬೇಲೂರಿನಲ್ಲಿ ಧಾರಾಕಾರ ಮಳೆ

14blrp5
ಗುರುವಾರ ಸಂಜೆ ಬೇಲೂರು ಪಟ್ಟಣದಲ್ಲಿ 1 ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿಯಿತು.
Published on

ಬೇಲೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಸಂಜೆ 6 ಗಂಟೆ ನಂತರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಅಂಗಡಿ, ಮುಂಗಟ್ಟುಗಳಿಗೆ ಛತ್ರಿ ಇಲ್ಲದೆ ಬಂದವರು ಮಳೆಯಲ್ಲಿ ನೆನೆಯುವಂತಾಯಿತು. ವಾಹನ ಸವಾರರು ಸಹ ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net