ಭಾರಿ ಮಳೆಯಿಂದ ತೋಟಗಳು ಜಲಾವೃತ

New Project (73)
Published on

ಬೆಳ್ತಂಗಡಿ: ತಾಲೂಕಿನಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದು, ನೇತ್ರಾವತಿ, ಮೃತ್ಯುಂಜಯ, ಸೋಮಾವತಿ, ಫಲ್ಗುಣಿ ಮೊದಲಾದ ನದಿಗಳಲ್ಲಿ, ನೆರಿಯ, ಅಣಿಯೂರು ಹೊಳೆಗಳಲ್ಲಿ ಭಾರಿ ಪ್ರಮಾಣದ ನೀರಿನ ಹರಿವು ಕಂಡುಬಂದಿದೆ.

ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ ಮೊದಲಾದ ಭಾಗಗಳಲ್ಲಿ ನೇತ್ರಾವತಿ ಹಾಗೂ ಮೃತ್ಯುಂಜಯ ಮತ್ತು ಶಿರ್ಲಾಲುವಿನ ಫಲ್ಗುಣಿ ನದಿ ಪರಿಸರದ ಕೆಲವು ತೋಟಗಳಿಗೆ ನದಿ ನೀರು ನುಗ್ಗಿ ತೋಟಗಳು ಜಲಾವೃತವಾದವು. ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ ಹಲವು ಮಂದಿ ನದಿಗಳ ನೀರು ಹೆಚ್ಚುತ್ತಿದ್ದಂತೆ ಸಂಬಂಧಿಕರ ಮನೆಗೆ ತೆರಳಿದರು. ಈಗಾಗಲೇ ತಾಲೂಕಿನಲ್ಲಿ 400ಕ್ಕಿಂತ ಅಧಿಕ ಮನೆಗಳಿಗೆ ಮಳೆಗಾಲದ ಸಂಭವನೀಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಮನೆಯಿಂದ ತೆರಳುವಂತೆ ಸ್ಥಳಿಯಾಡಳಿತದಿಂದ ನೋಟಿಸ್ ನೀಡಲಾಗಿದೆ.

ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದರೂ ಶಾಲೆಗಳಿಗೆ ರಜೆ ನೀಡದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net