ಅರಸೀಕೆರೆಯಲ್ಲಿ ಜಿಟಿಜಿಟಿ ಮಳೆ

ಅರಸೀಕೆರೆಯಲ್ಲಿ ಜಿಟಿಜಿಟಿ ಮಳೆ
Published on

ಅರಸೀಕೆರೆ: ಸೋಮವಾರ ತಡರಾತ್ರಿ ಆರಂಭಗೊಂಡ ವರುಣಾರ್ಭಟ ಮಂಗಳವಾರ ಮಧ್ಯಾಹ್ನ ಬಿಡುವು ನೀಡಿತು.

ಜಿಟಿ ಜಿಟಿ ಮಳೆಯಿಂದಾಗಿ ಜನರು ಹಾಲು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳಲು ಪರದಾಡುವಂತಾಗಿತ್ತು. ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೊಡೆಯ ಮೊರೆ ಹೋಗಿದ್ದ ದೃಶ್ಯ ಕಂಡು ಬಂದಿತು.

ರೈತರು ತಾವು ಬೆಳೆದಿದ್ದ ತರಕಾರಿಗಳನ್ನು ಮಾರುಕಟ್ಟೆಗೆ ತರಲು ಆಟೋ, ಟಾಟಾ ಪಿಕಪ್ ವಾಹನ ಒಳಗೊಂಡಂತೆ ಬೇರೆ ಬೇರೆ ವ್ಯವಸ್ಥೆ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದರು. ತಾಲೂಕಿನ ಗಂಡಸಿ, ಕಣಕಟ್ಟೆ, ಬಾಣಾವರ, ಕಸಬಾ ಹಾಗೂ ಜಾವಗಲ್ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ಹೆಸರು, ಉದ್ದು, ಎಳ್ಳು, ಆಲೂಗಡ್ಡೆ, ಮುಸುಕಿನ ಜೋಳ ಸೇರಿದಂತೆ ಬಿತ್ತನೆಯಾಗಿರುವ ವಿವಿಧ ಬೆಳೆಗಳಿಗೆ ಜೀವಕಳೆ ತಂದುಕೊಟ್ಟಿದೆ. ಹದ ಮಳೆ ಬೇಸಿಗೆಯ ಬಿಸಿಲಿನ ತಾಪ ಕಡಿಮೆ ಮಾಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net