

ಕಾರವಾರ:ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಉತ್ತಮ ಮಳೆಯಾಗಿದ್ದು, ಜೂನ್ 27 ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದ ಕಡೆಯಿಂದ ಗಂಟೆಗೆ 35 ರಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಗುಡುಗು ಸಹಿತ ಮಳೆ ಸುರಿಯಲಿದ್ದು, ಜೂನ್ 23 ರಂದು ಜಿಲ್ಲೆಯಲ್ಲಿ ಆರೇಂಜ್, ಜೂನ್ 24 ಹಾಗೂ 25 ರಂದು ರೆಡ್, ಮತ್ತ 26 ಹಾಗೂ 27 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ.
ಶನಿವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 45 ಮಿಮೀ, ಭಟ್ಕಳ-34.1, ಹಳಿಯಾಳ 4.7, ಹೊನ್ನಾವರ-43.3, ಕಾರವಾರ-75.1, ಕುಮಟಾ-32.5, ಮುಂಡಗೋಡ-0.2, ಸಿದ್ದಾಪುರ21.9, ಶಿರಸಿ-13.1, ಜೊಯಿಡಾ-29.2, ಯಲ್ಲಾಪುರ-5.6, ದಾಂಡೇಲಿ-4.3 ಮಿಮೀ ಮಳೆಯಾಗಿದೆ. ಮಳೆಯಿಂದ ವಿವಿಧೆಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಮುರಿದು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿತ್ತು.