

ಚಿತ್ರದುರ್ಗ: ಸಿಡಿಲು ಬಡಿದು ಬರೋಬ್ಬರಿ 106 ಕುರಿಗಳು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಬಳಿ ನಿನ್ನೆ(ಶುಕ್ರವಾರ) ನಡೆದಿದೆ.
ಜಾಜೂರು ಗ್ರಾಮದ ರಾತ್ರಿ ಸಿಡಿಲಿಗೆ ಗ್ರಾಮದ ಆಂಜನೇಯ ಎನ್ನುವ ಕುರಿಗಾಯಿಗೆ ಸೇರಿದ ಕುರಿಗಳು 90 ಹಾಗೂ ಓಬಣ್ಣ ಎನ್ನುವವರ 16 ಕುರಿಗಳು ಸೇರಿದಂತೆ 106 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ತಾಲ್ಲೂಕಿನಾದ್ಯಾಂತ ರಾತ್ರಿ ಮಳೆ ಸುರಿದ್ದು 8.30 ರ ಸಮಯದಲ್ಲಿ ಸಿಡಿಲು ಬಡಿತಕ್ಕೆ ಸಿಲುಕಿ ಕುರಿಗಳು ಮೃತ ಮಪಟ್ಟಿದ್ದು ಕುರಿಸಾಕಾಣಿಕೆ ದಾರರಿಗೆ ಅಪಾರ ನಷ್ಟವಾಗಿದ್ದು ಸಂಕಷ್ಟಕ್ಕೆ ಸಿಲುವಂತೆ ಮಾಡಿದೆ ಸಂಬಂಧಪಟ್ಟ ಅಧಿಕಾರಿ ಪರಿಹಾರದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಜಾಜೂರು ಗ್ರಾಮಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರಿಕ್ಷೆ ನಡೆಸಿದ್ದಾರೆ. ಅನುಗ್ರಹ ಯೋಜನೆಯಡಿ ಪರಿಹಾರಕ್ಕೆ ಸರಕಾರಕ್ಕೆ ಕಳಸಿಕೊಡಲಾಗುವುದು ಎಂದು ಸಹಾಯಕ ನಿರ್ದೇಶಕ ಡಾ.ರೇವಣ್ಣ ಮಾಹಿತಿ ನೀಡಿದ್ದಾರೆ. ಜಾಜೂರು ಗ್ರಾಮಕ್ಕೆ ತಹಸೀಲ್ದಾರ್ ರೇಹಾನ್ ಪಾಷ ಹಾಗೂ ಆರ್ ಐ ರಾಜೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂಜಿನಯ್ಯಗೆ ಸೇರಿದ 90 ಕುರಿಗಳು ಹಾಗೂ ಓಬಣ್ಣಗೆ ಸೇರಿದ 16 ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಕುರಿಗಳ ಮಾರಣಹೋಮದಿಂದ ಕುರಿಗಾಹಿಗಳು ಲಕ್ಷಾಂತರ ರೂ. ನಷ್ಟಕ್ಕೆ ಸಿಲುಕಿದ್ದಾರೆ.