ಟೊಮ್ಯಾಟೊ ಬೆಲೆ ಶೇ60 ರಷ್ಟು ಕುಸಿತ; ಬಾಂಗ್ಲಾದೇಶದ ಬಿಕ್ಕಟ್ಟಿನಿಂದ ಕೋಲಾರ ರೈತರಿಗೆ ಸಂಕಷ್ಟ

tomato que
Published on

ಬೆಂಗಳೂರು: ಬಾಂಗ್ಲಾದೇಶದಲ್ಲಿ ಉದ್ಯೋಗ ಕೋಟಾದ ಮೇಲೆ ಅಶಾಂತಿ ನಿರ್ಮಾಣವಾಗಿದೆ. ಇದರಿಂದಾಗಿ ಮಾಜಿ ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆ ನೀಡಿದ್ದಲ್ಲದೆ ಪಾಲಾಯನಗೈದಿದ್ದಾರೆ. ಅಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಕೋಲಾರದಲ್ಲಿ ಟೊಮ್ಯಾಟೊ ಬೆಲೆಯಿಂದ ರೈತರು ಕಂಗಾಲಾಗಿದ್ದಾರೆ.

ಬಾಂಗ್ಲಾದೇಶ ಮಾತ್ರವಲ್ಲದೆ, ಇಂಡೋನೇಷ್ಯಾ ಮತ್ತು ವಿವಿಧ ಭಾರತೀಯ ಮಾರುಕಟ್ಟೆಗಳಿಗೆ ಇಲ್ಲಿಂದ ರಫ್ತಾಗುತ್ತದೆ. ಆದರೀಗ ಬಾಂಗ್ಲಾದೇಶದ ಬಿಕ್ಕಟ್ಟಿನಿಂದ ಫಸ್ಟ್​ ಕ್ವಾಲಿಟಿ ಟೊಮ್ಯಾಟೊ ಬೆಲೆ ಶೇ.60 ರಷ್ಟು ಕುಸಿತ ಕಂಡಿದೆ.

ಕೋಲಾರದಿಂದ ಬಾಂಗ್ಲಾದೇಶಕ್ಕೆ ಪ್ರತಿದಿನ ಟೊಮ್ಯಾಟೊ ರಫ್ತಾಗುತ್ತದೆ. ಪ್ರತಿದಿನ 40 ಟ್ರಕ್​​ ಲೋಡ್​​ ಟೊಮೊಟೊ ಹೋಗುತ್ತದೆ. ಪ್ರತಿ ಟ್ರಕ್​ 900 ಬಾಕ್ಸ್ ಟೊಮೆಟೊ ಹೊತ್ತೊಯ್ಯುತ್ತದೆ. ಆದರೀಗ ಬಾಂಗ್ಲಾದಲ್ಲಿ ರಾಜಕೀಯ ಉದ್ವಿಗ್ನತೆ ಶುರುವಾಗಿನಿಂದ 20 ಟ್ರಕ್​ಗೆ ಇಳಿದಿದೆ. ಕಳೆದ ವಾರದಿಂದ ಎಲ್ಲಾ ಸಾಗಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಲಾರದ ರೈತರೊಬ್ಬರು​ ಹೇಳಿದ್ದಾರೆ.

ಕೋಲಾರದ ಟೊಮ್ಯಾಟೊ ವ್ಯಾಪಾರಿಗಳು ಹೇಳುವಂತೆ ಬಾಂಗ್ಲಾದೇಶದಲ್ಲಿ ಉದ್ಭವವಾದ ಸಮಸ್ಯೆಯಿಂದ ಫಸ್ಟ್​ ಕ್ವಾಲಿಟಿ ಟೊಮ್ಯಾಟೊ ಬೆಲೆ ಸುಮಾರು 60 ಪ್ರತಿಶತದಷ್ಟು ಕುಸಿದಿದೆ. 15ರಿಂದ 20 ಕೆಜಿ ತೂಕದ ಟೊಮೆಟೊ ಬಾಕ್ಸ್​ 1,100ರಿಂದ 1200 ರೂಪಾಯಿಗೆ ಮಾರಾಟವಾಗುತ್ತದೆ. ಬಾಂಗ್ಲಾದೇಶಕ್ಕೆ ಹೋಗುವ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಬಾಕ್ಸ್​ 450ರಿಂದ 500 ರೂಪಾಯಿಗೆ ಮಾರಾಟವಾಗುತ್ತದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net