ಹಾಲಾಡಿ ಪಪೂ ಕಾಲೇಜಿಗೆ ಬಿಸಿಯೂಟ ವ್ಯವಸ್ಥೆ

bisiyuta
ನ.7ರಂದು ಹಾಲಾಡಿ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಆರಂಭಿಸಲಾಯಿತು. ಅಶೋಕ ಶೆಟ್ಟಿ ಚೋರಾಡಿ, ಜನಾರ್ದನ, ಗುರುಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.
Published on

ಜನ್ನಾಡಿ: ಹಾಲಾಡಿ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಶೃಂಗೇರಿ ಶಾರದಾ ಪೀಠದ ಅನುಗ್ರಹರೂಪಿಯಾಗಿ, ಗ್ರಾಮೀಣ ಭಾಗದಿಂದ ಬಂದು ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಆರಂಭಿಸಲಾಯಿತು.

ಹಾಲಾಡಿ ಗ್ರಾಪಂ ಅಧ್ಯಕ್ಷ ಅಶೋಕ ಶೆಟ್ಟಿ ಚೋರಾಡಿ, ಸದಸ್ಯರಾದ ಜನಾರ್ದನ, ಗುರುಪ್ರಸಾದ್ ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಸದಸ್ಯೆ ಭಾರತಿ ಶೆಟ್ಟಿ, ದಾನಿಗಳಾದ ರಾಜೇಂದ್ರ ಕಿಣಿ ದಂಪತಿ, ಮಂಜುನಾಥ ಕಾಮತ್ ಹಾಲಾಡಿ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಹೆಗ್ಡೆ, ಭೋಜನ ವ್ಯವಸ್ಥೆಗೆ ಸಹಕಾರ ನೀಡುವ ಹಾಲಾಡಿ ಶ್ರೀ ಲಕ್ಷ್ಮೀನರಸಿಂಹ, ಮೊಕ್ತೇಸರ ಜಯರಾಮ ಹಾಲಂಬಿ, ದೇವಾಲಯದ ಅನ್ನದಾಸೋಹದ ಉಸ್ತುವಾರಿ ಸುರೇಂದ್ರ ಶೆಟ್ಟಿ, ದೇವಾಲಯ ಪ್ರಧಾನ ಅರ್ಚಕ, ಪತ್ರಕರ್ತ ಮಂಜುನಾಥ ಶೆಣೈ ಉಪಸ್ಥಿತರಿದ್ದರು. ಗಣಪತಿ ಹೆಗಡೆ ಸ್ವಾಗತಿಸಿದರು. ಶ್ರೀ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net