

ಹಾನಗಲ್ಲ: ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಿಂದ ವಿಕ್ರಮ ಮತ್ತು ರೋವರ್ಗಳು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಲೆಂದು ಪಟ್ಟಣದ ಹೃದಯವಂತರ ತಂಡದ ಸದಸ್ಯರು ಇಲ್ಲಿಯ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಬುಧವಾರ ಸಂಜೆ ವೇಳೆಗೆ ಚಂದ್ರನಲ್ಲಿ ರೋವರ್ಗಳು ಲ್ಯಾಂಡಿಂಗ್ ಆಗಲಿದೆ. ಇದು ಯಶಸ್ವಿಯಾಗಲಿ ಎಂಬ ಆಶಯದಿಂದ ದೇವರಲ್ಲಿ ಪ್ರಾರ್ಥಿಸಲಾಯಿತು.
ರವಿಚಂದ್ರ ಪುರೋಹಿತ, ರವಿ ಕಲಾಲ, ಭಾಸ್ಕರ ಹುಲಮನಿ, ಸಂತೋಷ ಭಜಂತ್ರಿ, ಅಜಯ ರೂಗಿಶೆಟ್ಟರ, ಪ್ರವೀಣ ಸುಲಾಖೆ, ರಿತೇಶ ತಳವಾರ, ಗುರು ಗೊಲ್ಲರ, ದೀಪು ಬೇವಿನಮರದ್, ಸಚಿನ್ ಓಂ, ರಾಜು ಮೆಹರವಾಡೆ ಇತರರಿದ್ದರು.