ಜಯದೇವ ಹೃದ್ರೋಗ ಆಸ್ಪತ್ರೆಗೆ ಮಾಜಿ ಸಿಎಂ ಧರ್ಮಸಿಂಗ್ ಹೆಸರಿಡಿ

IMG-20230605-WA0040
Published on

ಸರ್ಕಾರಕ್ಕೆ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ಅಧ್ಯಕ್ಷ ನರಿಬೋಳ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ
 ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ  ಜಯದೇವ ಹೃದ್ರೋಗ ಆಸ್ಪತ್ರೆಗೆ  ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಸ್ಮರಣಾರ್ಥ  ಜಯದೇವ ಹೃದ್ರೋಗ ಆಸ್ಪತ್ರೆ  ಎಂದು ನಾಮಕರಣ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಧರ್ಮಸಿಂಗ್ ಅವರ ಕೊಡುಗೆ ಅಪಾರವಾಗಿದೆ. ೧೯೮೦ರಲ್ಲಿ ಗುಂಡೂರಾವ ಸರ್ಕಾರದಲ್ಲಿ ಸಚಿವರಾಗಿದ್ದರು. ಹಿಂದುಳಿದ ಭಾಗದ ಅಭಿವೃದ್ಧಿಗಾಗಿ ಸಚಿವರಾಗುವುದಕ್ಕೂ  ಮೊದಲು ಧರ್ಮಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ವರದಿ ಆಧರಿಸಿಕೊಂಡು ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಯಿತು. ನಂತರದಲ್ಲಿ ೩೭೧ ಜೆ ತಿದ್ದುಪಡಿ ಬಳಿಕ ಎಚ್‌ಕೆಆರ್‌ಡಿಬಿ ಆಯಿತು.ನಂತರ ೨೦೧೯ ರಲ್ಲಿ  ಕೆಕೆಆರ್‌ಡಿಬಿಯಾಗಿ ಮರು ನಾಮಕರಣಗೊಂಡಿತು ಎಂದರು.
ಧರ್ಮಸಿAಗ್ ಅವರ ದೂರದೃಷ್ಟಿಯಿಂದಲೇ  ಕೆಕೆಆರ್‌ಡಿಬಿ ಅಸ್ತಿತ್ವಕ್ಕೆ ಬಂದಿದೆ. ಈಗ ಅದೇ ಮಂಡಳಿಯಿAದ ೧೮೩ ಕೋಟಿ ರೂ. ವೆಚ್ಚದಲ್ಲಿ ಜಯದೇವ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ನಿರ್ಮಿಸಲಾಗುತ್ತಿದೆ. ಅಜಾತಶತ್ರು ಎಂದು ಕರೆಸಿಕೊಂಡ ಧರ್ಮಸಿಂಗ್ ಅವರ ಸ್ಮರಣೆಯಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಹೀಗಾಗಿ ಈ ಆಸ್ಪತ್ರೆಯೊಂದಿಗೆ ಧರ್ಮಸಿಂಗ್ ಅವರನ್ನು ಸ್ಮರಿಸಲು ಸಕಾಲವಾಗಿದೆ. ಹೀಗಾಗಿ ಎನ್.ಧರ್ಮಸಿಂಗ್ ಸ್ಮರಣಾರ್ಥ ಜಯದೇವ ಹೃದ್ರೋಗ ಆಸ್ಪತ್ರೆ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಇದು ಜೇವರ್ಗಿ ಸೇರಿದಂತೆ ಇಡಿ ಕಲಬುರಗಿ ಜಿಲ್ಲೆ, ಕಲ್ಯಾಣ ಕರ್ನಾಟಕ ಹಾಗೂ ಕರ್ನಾಟಕ ಜನರ ಆಗ್ರಹವೂ ಆಗಿದೆ. ಹೀಗಿರುವಾಗ ಅವರ ಹೆಸರು ಇಡುವುದು ಸೂಕ್ತ  ಎಂದರು.
ವೈದ್ಯಕೀಯ ಶಿಕ್ಷಣ ಸಚಿವರು ಜಿಲ್ಲೆಯವರೇ ಆಗಿದ್ದಾರೆ. ಅಲ್ಲದೆ ಮಂಡಳಿಗೆ  ಧರಂಸಿAಗ್ ಅವರ ಪುತ್ರ ಅಜಯಸಿಂಗ್ ಅಧ್ಯಕ್ಷರಾಗಿದ್ದಾರೆ. ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಇತರರು ಸೇರಿಕೊಂಡು ಸಿಎಂ  ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ಅವರನ್ನು  ಭೇಟಿ ಮಾಡಿ ಒತ್ತಡ ಹೇರಬೇಕು.  ಧರ್ಮಸಿಂಗ್ ಹೆಸರಿಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಗೌಡ ಪೋಲಿಸ್ ಪಾಟೀಲ್, ರಾಘವೆಂದ್ರ ಕಲಕರ್ಣಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net