ಆಟೋ ಚಾಲಕರಿಗೆ ಹೃದ್ರೋಗ ಜಾಗೃತಿ

New Project (40)
Published on

ಮೂಡುಬಿದಿರೆ: ಆಟೋರಿಕ್ಷಾ ಚಾಲಕರಿಗೆ ಹೃದ್ರೋಗ ಜಾಗೃತಿ ಹಾಗೂ ತಪಾಸಣಾ ಶಿಬಿರ ಅಲಂಗಾರಿನ ಮೌಂಟ್ ರೋಸರಿ ಆಸ್ಪತ್ರೆಯಲ್ಲಿ ನಡೆಯಿತು.

ಮೌಂಟ್ ರೋಸರಿ ಆಸ್ಪತ್ರೆ ಅಲಂಗಾರು, ಯುವವಾಹಿನಿ ಮೂಡುಬಿದಿರೆ ಘಟಕ, ರಿಕ್ಷಾ ಚಾಲಕ-ಮಾಲೀಕರ ಸಂಘ ಮೂಡುಬಿದಿರೆ, ಅಪೋಲೋ ಫಾರ್ಮಸಿ ಮೂಡುಬಿದಿರೆ, ವಿ ಹೆಲ್ಪ್ ಟ್ರಸ್ಟ್ ಅಲಂಗಾರು ಆಶ್ರಯದಲ್ಲಿ ಆಯೋಜಿಸಲಾಯಿತು.

ಹೃದಯ ರೋಗ ತಜ್ಞ ಡಾ.ದೀತೇಶ್ ಎಂ.ಹೃದಯದ ಹಾರೈಕೆಯ ಬಗ್ಗೆ ಮಾಹಿತಿ ನೀಡಿದರು. ಮೌಂಟ್ ರೋಸರಿ ಸಂಸ್ಥೆಯ ಸುಪೀರಿಯರ್ ಜನರಲ್ ಸುನೀತಾ, ಆಸ್ಪತ್ರೆ ನಿರ್ದೇಶಕಿ ಪ್ರೆಸಿಲ್ಲಾ ಡಿಮೆಲ್ಲೊ, ಆಡಳಿತಾಧಿಕಾರಿ ಮೆಬಲ್ ಪಸ್ಸನ್ನ, ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞ ಡಾ.ಪುನೀತ್ ಪಕ್ಕಲ್, ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಮುರುಳಿದರ್ ಕೋಟ್ಯಾನ್, ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ದೀಪಕ್, ಅಪೋಲೋ ಪಾರ್ಮಸಿ ಮೂಡುಬಿದಿರೆ ವಿಭಾಗದ ಮುಖ್ಯಸ್ಥ ಶರತ್ ಉಪಸ್ಥಿತರಿದ್ದರು.

ಆಸ್ಪತ್ರೆಯ ಮಾನವ ಸಂಪನ್ಮೂಲ ಅಧಿಕಾರಿ ವಿನಿತ್ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯ ತಿಳಿಸಿದರು. ವಿಮಾ ಅಧಿಕಾರಿ ಅನಿಲ್ ಸ್ವಾಗತಿಸಿದರು. ಕಾವ್ಯಾ ವಂದಿಸಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶುಭಕರ್ ಅಂಚನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net