ಸಂಘಟಿತರಾಗದಿದ್ದರೆ ಮುಂದಿನ ಪೀಳಿಗೆಗೆ ಕುತ್ತು : ಸದಾಶಿವ ಉಳ್ಳಾಲ್‌ಕಳವಳ ಪ್ರತಿಭಾ ಪುರಸ್ಕಾರ, ತೀಯಾ ಕಣ್ಮಣಿ ಬಿರುದು ಪ್ರದಾನ

New Project (33)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಎಲ್ಲ ಸಮುದಾಯದವರು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ, ನಮ್ಮ ಸಮಾಜಕ್ಕೆ ಸಾಧ್ಯವಾಗಿಲ್ಲ. ನಾವಿನ್ನೂ ಸಂಘಟಿತರಾಗದಿದ್ದರೆ ಮುಂದಿನ ಪೀಳಿಗೆ ನಾವು ತೀಯಾರು ಎಂದು ಹೇಳಲು ಕಷ್ಟದ ಕಾಲ ಎದುರಾಗಬಹುದು. ಸಣ್ಣ ಸಮಾಜಕ್ಕೆ ಬೇಕಾದ ಅನುದಾನ, ನಿಗಮಗಳು ಸಿಕ್ಕಿದರೂ ತೀಯಾ ಸಮಾಜಕ್ಕೆ ಇವೆಲ್ಲ ಸಿಗದಿರಲು ಸಂಘಟನೆ ಕೊರತೆ ಕಾರಣ. ಎಂದು ಭಾರತೀಯ ತೀಯಾ ಸಮಾಜ ಕೇಂದ್ರೀಯ ಸಮಿತಿ ಅಧ್ಯಕ್ಷ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ಭಾರತೀಯ ತೀಯಾ ಸಮಾಜ ಉಳ್ಳಾಲ ವಲಯ ವತಿಯಿಂದ ಉಳ್ಳಾಲದ ಚೀರುಂಭ ಭಗವತೀ ಕ್ಷೇತ್ರದಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಹಾಗೂ ‘ತೀಯಾ ಕಣ್ಮಣಿ’ ಬಿರುದು ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಚಾರ ಪಟ್ಟವರು ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀಯ ತೀಯಾ ಸಮಾಜ ಉಳ್ಳಾಲ ವಲಯ ಅಧ್ಯಕ್ಷ ಜಯಂತ್ ಕೊಂಡಾಣ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ನಳಿನಾಕ್ಷಿ ಉದಯರಾಜ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಅಧ್ಯಕ್ಷ ಚಿದಾನಂದ ಗುರಿಕಾರ, ಮಹಿಳಾ ವೇದಿಕೆ ಅಧ್ಯಕ್ಷ ಮಾಧವಿ ಉಳ್ಳಾಲ್, ಯುವವೇದಿಕೆ ಪ್ರಧಾನ ಸಂಚಾಲಕ ಕೇಶವ ತೊಕ್ಕೊಟ್ಟು, ಉದ್ಯಮಿ ಉಮೇಶ್ ಬೆಂಜನಪದವು, ಜನಚೈತನ್ಯ ಸೇವಾ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಉಳ್ಳಾಲ್, ತೀಯಾ ಸೇವಾ ಸಹಕಾರ ಸಂಘದ ನಿರ್ದೇಶಕ ಸೂರಜ್ ಕೋಟೆಕಾರ್, ಉಳ್ಳಾಲ ನಗರಸಭೆ ಉಪಾಧ್ಯಕ್ಷೆ ಸಪ್ನ ಹರೀಶ್, ಸಮಾಜ ಸೇವಕ ಬಾಬು ಪಿಲಾರ್, ಭಾರತೀಯ ತೀಯ ಸಮಾಜ ಉಳ್ಳಾಲ ವಲಯ ಉಪಾಧ್ಯಕ್ಷ ಮನೋಹರ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಸುರೇಖಾ ಸ್ವಾಗತಿಸಿ, ಸುಖೇಶ್ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

ಅಂಕ ಪಡೆದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಂಘಟನೆಗಳ ಕಾರ್ಯ ಒಳ್ಳೆಯದು. ಮುಂಬರುವ ದಿನಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಪಾಸಾದ ಎಲ್ಲ ಮಕ್ಕಳನ್ನು ಗುರುತಿಸಿ ಅವರಿಗೂ ವಿದ್ಯಾರ್ಥಿವೇತನ ನೀಡುವ ಮೂಲಕ ಸಮಾನವಾಗಿ ಕಾಣುವ ಕಾರ್ಯಕ್ರಮ ನಡೆಸಬೇಕು. ಬಾಬು ಪಿಲಾರು, ಸಮಾಜ ಸೇವಕ

ಸನ್ಮಾನ, ಅಭಿನಂದನೆ

ಹಿರಿಯ ಸಮಾಜ ಸೇವಕಿ ಸುಹಾಸಿನಿ ಬಬ್ಬುಕಟ್ಟೆ ಅವರಿಗೆ ‘ತೀಯಾ ಕಣ್ಮಣಿ’ ಬಿರುದು ನೀಡಿ ಸನ್ಮಾನಿಸಲಾಯಿತು. ಪಿಎಚ್.ಡಿ ಪಡೆದ ತೀಯಾ ಸಮಾಜದ ಡಾ.ಹರಿಣಿ ಕುಂಪಲ, ಉಚ್ಚಿಲ ಭಗವತೀ ಆಂಗ್ಲ ಮಾಧ್ಯಮ ಶಾಲೆಯ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕಿ ಸುರೇಖಾ, ತುಳುವ ಮಹಾಸಭೆ ಉಳ್ಳಾಲ ತಾಲೂಕು ಘಟಕದ ಸಂಚಾಲಕರಾಗಿ ನೇಮಕಗೊಂಡ ಪವನ್ ರಾಜ್ ಕೊಲ್ಯ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net