

ಮದ್ದೂರು: ರಕ್ತಕ್ಕೆ ಪರ್ಯಾಯವಾದ ವಸ್ತು ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ. ಹಾಗಾಗಿ ಆರೋಗ್ಯವಂತರು ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದಲ್ಲಿ ಮೀಲಾದ್ ಉನ್ ಸಬಿ ಪ್ರಯುಕ್ತ ಉಸ್ಮಾನ್ ಫನಿ ಬ್ರದರ್ಸ್ ವತಿಯಿಂದ ಮಸ್ಜಿದ್ ಎ ಉಸ್ಮಾನ್ ಘನಿ ಸುನ್ನಿ ಚೌಕ್, ಮುಹಲ್ಲಾ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ರಕ್ತದ ಅವಶ್ಯಕತೆ ತುಂಬ ಇರುವುದರಿಂದ ಆರೋಗ್ಯವಂತರು ರಕ್ತದಾನ ಮಾಡಬೇಕು. ಇದರಿಂದ ರಕ್ತದ ಅವಶ್ಯಕತೆ ಇರುವವರಿಗೆ ತುಂಬಾ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಮುಖಂಡರಾದ ಇಮ್ರಾನ್, ರೈಹಾನ್, ಹಬೀಬ್, ನಜೀಮ್, ಸುಹೀಲ್‌ದೋಹಿದ್, ಮಸ್ಜಿದ್ ಕಮಿಟಿಯ ಅಧ್ಯಕ್ಷ ಇನಾಯತ್ ವುಲ್ಲಾ ಖಾನ್, ಕಾರ್ಯದರ್ಶಿ ಸುಕ್ಕೂರ್ ಹಾಗೂ ಆರೀಫ್, ಪರ್ವಿಜ್ ಪಾಷ, ಜಮೀರ್ ಮಹಮದ್, ಕೌಶರ್, ಅಕ್ಮಲ್, ಫಯಾಜ್, ಪುರಸಭಾ ಸದಸ್ಯ ಎಂ.ಬಿ.ಸಚಿನ್, ಕಾಂಗ್ರೆಸ್ ಮುಖಂಡ ಪೈರೋಜ್ ಖಾನ್ ಇದ್ದರು.