

ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ಸಭಾಂಗಣದಲ್ಲಿ ಜನಪ್ರತಿನಿಧಿಗಳಿಗೆ ಮತ್ತು ಕಾರ್ಯಪಡೆ ಸದಸ್ಯರಿಗೆ ಆರೋಗ್ಯ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೆ.ಮಂಜುಳಾ ಮಾತನಾಡಿ, ಸಮುದಾಯದ ಯೋಗ ಕ್ಷೇಮ ಹಾಗೂ ಒಗ್ಗೂಡುವಿಕೆಗೆ ಕಾರ್ಯಕ್ರಮ ಸಹಕಾರಿಯಾಗಿದೆ.
ಸಮುದಾಯ ಆರೋಗ್ಯ ನಿರ್ವಹಣೆಯಲ್ಲಿ ಗ್ರಾ.ಪಂ.ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಗ್ರಾಮಪಂಚಾಯಿತಿಯಲ್ಲಿ ಆರೋಗ್ಯ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳುತ್ತಿದೆ ಎಂದರು.
ಅಂಗನವಾಡಿ ಶಿಕ್ಷಕಿ ಚಿನ್ನಮ್ಮ ಬಾಲ್ಯ ವಿವಾಹ ತಡೆ ಕುರಿತು ಮಾಹಿತಿ ನೀಡಿದರು. ಬ್ಯಾಡಗೊಟ್ಟ ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಮೇದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯ ಎಂ.ಎಂ.ಹನೀಫ್, ಪಾವನಾ, ಲೀನಾ, ಮೋಕ್ಷಿತ್ ರಾಜ್, ದಿನೇಶ್ ಕುಮಾರ್, ಪಿಡಿಒ ಗಿರೀಶ್, ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ, ಶೋಭಾ, ವನಿತಾ, ಜಲಜಾಕ್ಷಿ , ಆಶಾ ಕಾರ್ಯಕರ್ತೆ ಲಲಿತಾ, ಅನಿತಾ, ವಿಜಯಲಕ್ಷ್ಮೀ, ಚನ್ನಾಜಿ, ಶಾಹಿದಾ ಗ್ರಾ.ಪಂ.ಸಿಬ್ಬಂದಿ ರಾಜೇಶ್, ರಂಜಿತಾ, ಸಚಿನ್ ಇತರರಿದ್ದರು.