

ಗೋಕಾಕ: ನಗರದ ಗೋಕಾಕ ಎಜುಕೇಷನ್ ಸೊಸೈಟಿಯ ಬಿ.ಇಡಿ ಕಾಲೇಜಿನಲ್ಲಿ ಈಚೆಗೆ ಆರೋಗ್ಯ ಹಾಗೂ ಸಾಮಾಜಿಕ ಜಾಗೃತಿ ವಿಷಯಗಳ ಕುರಿತು ಉಪನ್ಯಾಸ ನಡೆಯಿತು. ಭಾರತೀಯ ವೈದ್ಯಕಿಯ ಸಂ (ಐಎಂಎ) ಗೋಕಾಕ ಶಾಖೆಯ ಕಾರ್ಯದರ್ಶಿ ಡಾ.ವಿಶ್ವನಾಥ ಶಿಂದೋಳಿಮಠ ಮಾತನಾಡಿ, ಬದಲಾದ ಜೀವನಶೈಲಿಯಿಂದ ಜನರಲ್ಲಿ ಮಧುಮೇಹ, ರಕ್ತದೊತ್ತಡ, ಬೊಜ್ಜು ಹೆಚ್ಚುತ್ತಿದೆ ಎಂದರು. ಮಾದಕ ಪದಾರ್ಥಗಳ ದುರುಪಯೋಗ, ಯೌವನದಲ್ಲಿ ಪೌಷ್ಟಿಕ ಆಹಾರದ ಮಹತ್ವ, ಬಾಲ್ಯ ವಿವಾಹದ ಹಾನಿಕಾರಕ ಪರಿಣಾಮಗಳು, ರಸ್ತೆ ಸುರತಾ ನಿಯಮಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿ.ಇ ಎಸ್ ಸೊಸೈಟಿಯ ಕಾರ್ಯದರ್ಶಿ ಜಿ.ಎಂ.ವಾಲಿ ಹಾಗೂ ಪ್ರಾಚಾರ್ಯ ಡಾ.ವಿರಾಜ ಮೋದಿ ಹಾಗೂ ಉಪನ್ಯಾಸಕರು ಇದ್ದರು. 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.