

ಕೋಟ: ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಎಂಆರ್‌ಐ ಗ್ರೀನ್ ಹೆಲ್ತ್ ಸರ್ವೀಸ್ 108 ಆಂಬುಲೆನ್ಸ್ ಆರೋಗ್ಯ ಕವಚ ದಿನ ಬುಧವಾರ ಆಚರಿಸಲಾಯಿತು.
ಕೋಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಶುಭಹಾರೈಸಿದರು. ಕೋಟದ 108 ವಾಹನದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಆರೋಗ್ಯ ಕವಚ ಅಧಿಕಾರಿ ಮಹಾಬಲ, ಜಿಲ್ಲಾ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ, ವೈದ್ಯರು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ, 108 ಆರೋಗ್ಯ ಕವಚದ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞೆ ಡಾ.ಆರತಿ ಕಾರಂತ್, ದಂತ ವೈದ್ಯ ಡಾ.ಅನಾಲಿನ್, ಡಾ.ವಿಶ್ವನಾಥ್ ಉಪಸ್ಥಿತರಿದ್ದರು.