

ಹನುಮಸಾಗರ: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಆರೋಗ್ಯದಿಂದ ಇರುವುದು ಅವಶ್ಯ. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ತಪಾಸಣೆ ಮಾಡಿಸಿ ಎಂದು ಯರಗೇರಾ ಗ್ರಾಪಂ ಅಧ್ಯಕ್ಷ ಬಸವರಾಜ ಶೆಟ್ಟರ್ ಹೇಳಿದರು.
ಇದನ್ನೂ ಓದಿ: ತೆಂಗಿನಕಾಯಿ ಕೊಬ್ಬರಿ ಎಣ್ಣೆಯಿಂದ ಆರೋಗ್ಯ ವೃದ್ಧಿ
ಯರಗೇರಾದ ಗ್ರಾಪಂ ಹಾಗೂ ಕೊಪ್ಪಳದ ಕೆಎಸ್‌ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಗ್ರಾಮೀಣ ಜನರು ಆರೋಗ್ಯಕ್ಕೆ ಒತ್ತು ಕೊಡದೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಮೃತಪಡುತ್ತಿದ್ದಾರೆ. ಜೀವನದಲ್ಲಿ ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲರ ಅದ್ಯತೆಯಾಗಬೇಕು. ಆರೋಗ್ಯ ಉಚಿತ ತಪಾಸಣಾ ಶಿಬಿರಗಳ ಮಾಹಿತಿ ಪಡೆದುಕೊಂಡು ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಜೀವನ ಸಾಗಿಸಿ ಎಂದರು.
ಕೆಎಸ್ ಆಸ್ಪತ್ರೆ ವೈದ್ಯರಾದ ಶಿವಶಂಕರ, ಐಶ್ವರ್ಯ ಪ್ರವೀಣ್, ರುಷಿಕೇಶ, ದೀಕ್ಷಿತಾ, ದಿವ್ಯಾ, ಗ್ರಾಮದ ಮುಖಂಡರಾದ ಹನಮಂತಪ್ಪ ದಾಸರ, ಮಹೇಶ ನೆರತೆಲಿ, ಮುತ್ತು ಸೂಡಿ, ಮುತ್ತಪ್ಪ ತಳವಾರ, ಹನುಮಪ್ಪ ಮ್ಯಾಗಳಮನಿ ಇತರರಿದ್ದರು.