ತೆಂಗಿನಕಾಯಿ ಕೊಬ್ಬರಿ ಎಣ್ಣೆಯಿಂದ ಆರೋಗ್ಯ ವೃದ್ಧಿ

(2) NUGGEHALLI
ಅಕ್ಕನಹಳ್ಳಿ ವೃತ್ತದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ಲೋಕೇಶ್, ದೊರೆಸ್ವಾಮಿ, ಪುಟ್ಟಸ್ವಾಮಿ, ವಿಕ್ಟರ್, ನವೀನ್, ಬೋರೇಗೌಡ ಇದ್ದರು.
Published on

ನುಗ್ಗೇಹಳ್ಳಿ: ತೆಂಗಿನಕಾಯಿ ಕೊಬ್ಬರಿ ಎಣ್ಣೆ ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಅಕ್ಕನಹಳ್ಳಿ ವೃತ್ತದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕ, ಚನ್ನರಾಯಪಟ್ಟಣದ ಎಚ್‌ಡಿಎಫ್‌ಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತೆಂಗು ಹಾಗೂ ಕೊಬ್ಬರಿ ಎಣ್ಣೆಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು, ಅಮೆರಿಕದಂತಹ ಮುಂದುವರಿದ ದೇಶಗಳಲ್ಲೂ ಇದನ್ನು ಉಪಯೋಗಿಸಲಾಗುತ್ತಿದೆ. ಆರೋಗ್ಯವೇ ಸಕಲ ಸಂಪತ್ತಾಗಿದ್ದು, ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದ ಅವರು, ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೀಘ್ರ ಆರೋಗ್ಯ ಮೇಳ ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ರ್.ದೊರೆಸ್ವಾಮಿ ಮಾತನಾಡಿ. ನ.29ರಂದು ಇಲ್ಲಿನ ಯಂಗ್ ಸ್ಟಾರ್ ವಾಲಿಬಾಲ್ ಕ್ಲಬ್ ಕ್ರೀಡಾಂಗಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶಾಸಕಾ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ, ಪುರ ವರ್ಗ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ರಾಜ್ಯ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವೈದ್ಯರಾದ ಲೋಕೇಶ್, ಡಾ.ವರದರಾಜ್, ಶ್ರೀಲತಾ, ಮುಖಂಡರಾದ ಬೆಳಗಲಿ ಪುಟ್ಟಸ್ವಾಮಿ, ವಿಕ್ಟರ್, ಹುಲಿಕೆರೆ ಎಚ್.ಪಿ.ಸಂಪತ್‌ಕುಮಾರ್, ಲಕ್ಷ್ಮಣ್ಗೌಡ, ಪುಟ್ಟರಾಜು, ನವೀನ್‌ಕುಮಾರ್, ಮಧು, ಬೋರೇಗೌಡ, ಚೇತು, ನಟರಾಜ ಯಾದವ್, ಪಿಡಿಒ ಮರಿಗೌಡ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net