

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ, ಪಾಂಡೇಶ್ವರ ವಲಯದ ಸಾಸ್ತಾನ ಕಾರ್ಯಕ್ಷೇತ್ರದ ವಿಕಾಸ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮದಡಿ ಆರೋಗ್ಯ ಮಾಹಿತಿ ಕಾರ್ಯಕ್ರಮ ಭಾನುವಾರ ಪಾಂಡೇಶ್ವರ ಯಡಬೆಟ್ಟುವಿನಲ್ಲಿ ಜರುಗಿತು.
ಉಡುಪಿ ಉದ್ಯಾವರದ ಆಯುರ್ವೇದಿಕ್ ಆಸ್ಪತ್ರೆ ಡಾ.ಸಹನಾ ಗುದದ್ವಾರದ ಸಮಸ್ಯೆ, ಅದಕ್ಕೆ ಸಂಬಂಧಿಸಿದ ರೋಗಗಳು, ತಡೆಗಟ್ಟುವ ಬಗ್ಗೆ ಮತ್ತು ಮನೆಮದ್ದು, ದಿನನಿತ್ಯದ ಆಹಾರದ ಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ.ಕೆ. ಉದ್ಘಾಟಿಸಿದರು. ಯಡಬೆಟ್ಟು ಸೇವಾಪ್ರತಿನಿಧಿ ಜ್ಯೋತಿ, ಐರೋಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಚಂದ್ರಕಲಾ, ಯಕ್ಷಿಮಠದ ಸೇವಾಪ್ರತಿನಿಧಿ ವೀಣಾ ಪೈ ಉಪಸ್ಥಿತರಿದ್ದರು. ತಾಲೂಕಿನ ಸಮನ್ವಯ ಅಧಿಕಾರಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಪಾಂಡೇಶ್ವರ ವಲಯದ ಮೇಲ್ವಿಚಾರಕ ಜಯಲಕ್ಷ್ಮೀ ಸ್ವಾಗತಿಸಿದರು. ಸಾಸ್ತಾನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶೋಭಾ ವಂದಿಸಿದರು.