ಮಾಬುಕಳ ಚೇತನ ಪ್ರೌಢಶಾಲೆಯಲ್ಲಿ ಪುನರ್ ಮಿಲನ 2024

Mabukala
ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ವಿಘ್ನೇಶ್ವರ ಹೆಬ್ಬಾರ್, ಶಿಕ್ಷಕ ಸುರೇಂದ್ರ ವಾಗ್ಳೆ, ಚೇತನ ಪ್ರೌಢಶಾಲೆಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ಗಣೇಶ್ ಜಿ. ಅವರಿಗೆ ಗುರುವಂದನೆ ಸಲ್ಲಿಸಲಾಯಿತು
Published on

ಕೋಟ: ಹಳೇ ವಿದ್ಯಾರ್ಥಿಗಳು ಶಾಲೆ ಅಭಿವೃದ್ಧಿಗೆ ಮುಂಚೂಣಿಗೆ ನಿಲ್ಲಬೇಕು ಆಗ ತಾವು ಕಲಿತ ಶಾಲೆ ಗುರುವಂದನೆಯಷ್ಟೇ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಎಂದು ಶಿಕ್ಷಣ ತಜ್ಞ ಚೆಲ್ಲಮಕ್ಕಿ ಗಣೇಶ್ ಜಿ. ಹೇಳಿದರು.

ಮಾಬುಕಳದ ಚೇತನ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ 2024 ಕಾರ್ಯಕ್ರಮದಲ್ಲಿ ಶನಿವಾರ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಹಿರಿಯ ನಿವೃತ್ತ ಶಿಕ್ಷಕ ವಿಘ್ನೇಶ್ವರ ಹೆಬ್ಬಾರ್, ಶಿಕ್ಷಕ ಸುರೇಂದ್ರ ವಾಗ್ಳೆ, ಚೇತನ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಲ್ಪನಾ ಶೆಟ್ಟಿ, ಗಣೇಶ್ ಜಿ. ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲಾ ಕ್ಲರ್ಕ್ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿಗಳಾದ ವಿಶ್ವನಾಥ, ವಿಜಯ್ ಕುಮಾರ್, ಶ್ರೀಕರ, ಕಲಾವತಿ, ರೇಷ್ಮಾ ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಹಳೇ ವಿದ್ಯಾರ್ಥಿಗಳಾದ ಸುನೀತಾ ಸ್ವಾಗತಿಸಿದರು. ಶುಭ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕೆ.ವಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net