

ಬೆಂಗಳೂರು: ಡೆಂಘೆ ಪರೀಕ್ಷೆಗೆ ಸರ್ಕಾರ ನಿಗದಿ ಪಡಿಸಿದ್ದ ದರಕ್ಕಿಂತ ಹೆಚ್ಚುವರಿ ದರ ಪಡೆಯುತ್ತಿದ್ದ ನಗರದ 22 ಪ್ರಯೋಗಾಲಯಗಳಿಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ಹಾಗೂ ಕೆಪಿಎಂಇ ಅಧಿನಿಯಮದನ್ವಯ ಆರೋಗ್ಯ ಇಲಾಖೆಯ ನೋಟಿಸ್ ನೀಡಿದೆ.
ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚು ದರ ಪಡೆಯುತ್ತಿರುವ ಕುರಿತು ಮಾಧ್ಯಮಗಳ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆ.ಪಿ.ಎಂ.ಇ.) ನೋಡಲ್ ಅಧಿಕಾರಿಗಳ ತಂಡವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಬೆಂ.ಉತ್ತರ, ಬೆಂ.ದಕ್ಷಿಣ, ಬೆಂ.ಪೂರ್ವ ಮತ್ತು ಆನೇಕಲ್ ತಾಲೂಕು ವ್ಯಾಪ್ತಿಯ 31 ಖಾಸಗಿ ಸಂಸ್ಥೆಗಳಿಗೆ, ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಿಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದರು.
ಈ ವೇಳೆ 22 ಪ್ರಯೋಗಾಲಯಗಳು ಸರ್ಕಾರ ನಿಗದಿ ಪಡಿಸಿರುವುದಕ್ಕಿಂತ ( ಡೆಂಘೆ ಎಲಿಸಾ ಎನ್‌ಎಸ್1 300ರೂ., ಡೆಂಘೆ ಎಲಿಸಾ 1ಜಿಎಂ 300 ರೂ., ರ‌್ಯಾಪಿಡ್ ಕಾರ್ಡ್ ಟೆಸ್ಟ್ ಎನ್‌ಎಸ್1, 1ಜಿಎಂ ಮತ್ತು 1ಜಿಜಿ 250 ರೂ.)ಡೆಂಘೆ ಪರೀಕ್ಷೆಗೆ ಹೆಚ್ಚುವರಿ ದರ ಪಡೆಯುತ್ತಿದದ್ದು ದೃಢಪಟ್ಟಿದೆ. ಅವರ ವಿರುದ್ಧ ಕೆಪಿಎಂಇ ಅಧಿನಿಯಮದನ್ವಯ ನೋಟಿಸ್ ನೀಡಲಾಗಿದ್ದು, ಸದರಿ ಕೇಂದ್ರಗಳಿಗೆ ಕಾಯ್ದೆಯಡಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹೆಚ್ಚುವರಿ ದರ ಪಡೆದರೆ ದೂರು ಸಲ್ಲಿಸಿ: ಡೆಂಘೆ ಪರೀಕ್ಷೆಗೆ ಸರ್ಕಾರ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚುವರಿ ದರ ಪಡೆಯುವ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳ ವಿರುದ್ಧ ಸಾರ್ವಜನಿಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಹಳೆ ಕ್ಷಯರೋಗಿಗಳ ಆಸ್ಪತ್ರೆ ಆವರಣ, ಹಳೇ ಮದ್ರಾಸ್ ರಸ್ತೆ, ಇಂದಿರಾನಗರ, ಬೆಂಗಳೂರು - 38. ಇ-ಮೇಲ್: ಟಚಿಚ್ಞಜಚ್ಝಟ್ಟಛ್ಠ್ಟಿಚಿಚ್ಞಃಜಞಜ್ಝಿ.್ಚಟಞ ಮೊ: 9449843037ಗೆ ದೂರು ಸಲ್ಲಿಸಬಹುದಾಗಿದೆ.