ಶಾರದಾ ಕಾಲೇಜಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ

New Project (3)
Published on

ಉಳ್ಳಾಲ: ತಲಪಾಡಿ ದೇವಿನಗರ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶಿಬಿರದ ತಜ್ಞ ಡಾ.ಸಪ್ನಾ ದಿನೇಶ್ ಭಂಡಾರಿ, ಡಾ.ಹರ್ಷ ಎಸ್., ಡಾ.ಸೌಮ್ಯಲಕ್ಷ್ಮೀ ಎಸ್. ಉಪಸ್ಥಿತರಿದ್ದರು.

ಕಿವಿ, ಮೂಗು, ಗಂಟಲು ವಿಭಾಗ ಹಾಗೂ ವಾನಸಿಕ ರೋಗ ವಿಭಾಗ ವತಿಯಿಂದ ನ.19ರಿಂದ ನ.23ರವರೆಗೆ ಶಿಬಿರ ನಡೆಯಲಿದ್ದು, ಮೂಗಿನ ಅಲರ್ಜಿ, ನಿರಂತರ ಕಾಡುವ ಸೀನು, ನೆಗಡಿ, ಮೂಗಿನಲ್ಲಿ ನೀರಿಳಿಯುವುದು, ಅತಿಯಾದ ಚಿಂತೆ, ನಿದ್ರೆಯ ತೊಂದರೆ, ಮನಸ್ಸಿನಲ್ಲಿ ಗೊಂದಲ, ಹೆಚ್ಚಾದ ಎದೆ ಬಡಿತ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ದೂ.ಸಂ.: 8971153232ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net