ವೆಂಕಟ್ರಮಣ ಹೊಳ್ಳಗೆ ಅಭಿನಂದನೆ

New Project (54)
Published on

ಕಾಸರಗೋಡು: ಧಾರ್ಮಿಕ, ಸಾಂಸ್ಕೃತಿಕ ರಾಯಭಾರಿ ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಕನ್ನಡ, ತುಳು ಭಾಷಾ ಸಂಘಟನೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರಿಗೆ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು ಕೇರಳ- ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಕಾಸರಗೋಡು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ)ಅಧ್ಯಕ್ಷ, ಹಿರಿಯ ವೈದ್ಯಾಧಿಕಾರಿ ಡಾ.ಹರಿಕಿರಣ್ ಬಂಗೇರ ಸನ್ಮಾನಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ಸನ್ಮಾನಪತ್ರ ವಾಚಿಸಿದರು.

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ಘಟಕ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರ ಸಭೆಯ ಕೌನ್ಸಿಲರ್‌ಗಳಾದ ಕೆ.ವರಪ್ರಸಾದ ಕೋಟೆಕಣಿ, ಶಾರದಾ ಬಿ., ಹೇಮಲತಾ ಕಾಸರಗೋಡು, ಸಂಘಟಕಿ ಆಯಿಷಾ ಎ.ಎ.ಪೆರ್ಲ, ಲವ ಕೆ.ಮೀಪುಗುರಿ, ಸಾಹಿತಿ, ಕವಿ ರಾಧಾಕೃಷ್ಣ ಕೆ.ಉಳ್ಳಿಯತ್ತಡ್ಕ, ಕೆ.ವಿ.ರಮೇಶ್, ಪ್ರೇಮ್ ಕಿಶೋರ್ ಕುಂಬಳೆ, ಕವಿ, ಸಂಘಟಕ ಸುಭಾಷ್ ಪೆರ್ಲ, ಸಮ್ಮೇಳನ ಸರ್ವಾಧ್ಯಕ್ಷೆ ಹರ್ಷಿತಾ ಪಿ.ಬದಿಯಡ್ಕ, ದಿವಾಕರ ಪಿ.ಅಶೋಕನಗರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net