

ಬೆಳ್ತಂಗಡಿ: ಮುಂಡಾಜೆ ರೋಟರಿ ನೇತೃತ್ವದಲ್ಲಿ ಕ್ರೈಸ್ಟ್ ಅಕಾಡೆಮಿ ಸಹಭಾಗಿತ್ವದಲ್ಲಿ ಉಜಿರೆ ಬೆನಕ ಚಾರಿಟೆಬಲ್ ಟ್ರಸ್ಟ್ ಹಾಗೂ ಬೆನಕ ಹೆಲ್ತ್ ಸೆಂಟರ್ ವತಿಯಿಂದ ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ ನಡೆಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಶಿಬಿರ ಉದ್ಘಾಟಿಸಿದರು. ಕ್ರೈಸ್ಟ್ ಅಕಾಡೆಮಿ ಪ್ರಿನ್ಸಿಪಾಲ್ ಜಾರ್ಜ್ ಸಿ.ಎಂ.ಐ., ಮುಂಡಾಜೆ ರೋಟರಿ ಸಮುದಾಯ ದಳ ಅಧ್ಯಕ್ಷ ಪಿ.ಸಿ.ಸೆಬಾಸ್ಟಿಯನ್, ಕಾರ್ಯದರ್ಶಿ ರಾಕೇಶ್, ಬೆನಕ ಆಸ್ಪತ್ರೆಯ ಜನರಲ್ ವ್ಯಾನೇಜರ್ ದೇವಸ್ಯ, ಪಿಆರ್‌ಒ ಎಸ್.ಜಿ.ಭಟ್, ರೋಟರಿ ಕ್ಲಬ್ ಬೆಳ್ತಂಗಡಿ ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಮೇ.ಜ.ಎಂ.ವಿ.ಭಟ್, ವೆಂಕಟೇಶ್ವರ ಭಟ್ ಕಜೆ ಮತ್ತಿತರರಿದ್ದರು.