

ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಶಾಖೆಯ ವತಿಯಿಂದ ಇತ್ತೀಚೆಗೆ ಆರಕ್ಷಕ ನಿವೃತ್ತ ನೌಕರ ಸಂಘದ ಸದಸ್ಯರಿಗೆ ಹಾಗೂ ಕುಟುಂಬ ಸದಸ್ಯರಿಗೆ ಗುರುವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಒಟ್ಟು 170ಕ್ಕೂ ಹೆಚ್ಚಿನ ಜನರು ತಪಾಸಣೆಗೆ ಒಳಗಾದರು. 16 ಜನ ನೇತ್ರದಾನಕ್ಕೆ ನೋಂದಾಯಿಸಿಕೊಂಡರು. ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ರಂಗಲಕ್ಷ್ಮೀ, ಮೂಳೆ ರೋಗ ತಜ್ಞ ಡಾ.ಅಬ್ದುಲ್ ಬಷೀರ್, ಜಿಲ್ಲಾ ಎನ್‌ಸಿಡಿ ತಂಡದಿಂದ ಬಿಪಿ ಶುಗರ್ ತಪಾಸಣೆ ಮತ್ತು ಡಾ.ಮಹಿತಾ (ಫಿಜಿಶಿಯನ್) ಹಾಗೂ ಡಾ.ಮಹೇಶ್ ತಪಾಸಣೆ ನಡೆಸಿದರು.
ಹಾಸನಾಂಬ ದಂತ ವೈದ್ಯಕೀಯ ಕಾಲೇಜಿನ ದಂತ ತಜ್ಞರಿಂದ ದಂತ ತಪಾಸಣೆ, ಡಾಕ್ಟರ್ ಅಗರ್ವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆ ನಡೆಸಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ರೆಡ್ ಕ್ರಾಸ್ ಸಂಸ್ಥೆಯ ಪ್ರಾಂತಪಾಲ ಹೆಮ್ಮಿಗೆ ಮೋಹನ್, ನಿವೃತ್ತ ಪೊಲೀಸರ ಸಂಘದ ಅಧ್ಯಕ್ಷ ದೊಡ್ಡೇಗೌಡ, ಕಾರ್ಯದರ್ಶಿ ಚಂದ್ರೇಗೌಡ, ನಾಗರಾಜು, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಶಬ್ಬೀರ್ ಅಹ್ಮದ್, ಜಯೇಂದ್ರಕುಮಾರ್, ಎಚ್.ಡಿ. ಕುಮಾರ್, ಅಮ್ಜದ್ ಖಾನ್, ಉದಯ್ ಕುಮಾರ್, ಮಮತಾ ಪಾಟೀಲ್ , ಗಿರೀಶ್, ಭೀಮ್ ರಾಜ್, ಆರಿಫ್, ಸುನಂದಮ್ಮ, ಹರ್ಷಿತ್, ಚಂದನ್, ಅವಿನಾಶ್ ಇತರರಿದ್ದರು.