ವರಂಗದಲ್ಲಿ ಆರೋಗ್ಯ ತಪಾಸಣಾ ಶಿಬಿರ

varshikothsava
Published on

ಹೆಬ್ರಿ: ರೋಟರಿ ಕ್ಲಬ್, ಮಣಿಪಾಲ ರೋಟರಿ ಸಮುದಾಯ ದಳ, ಹೆಬ್ರಿ ಲಯನ್ಸ್ ಕ್ಲಬ್, ವರಂಗ ಸಹಕಾರಿ ವ್ಯವಸಾಯ ಸಂಘ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಆಶ್ರಯದಲ್ಲಿ ಡಾ.ಪಿ.ಎನ್ ಶ್ರೀನಿವಾಸ್ ರಾವ್ ಸ್ಮರಣಾರ್ಥ ಕಣ್ಣಿನ ಉಚಿತ ತಪಾಸಣೆ ಮತ್ತು ಸಮಗ್ರ ಆರೋಗ್ಯ ತಪಾಸಣೆ ಶಿಬಿರ ವರಂಗ ಶ್ರೀರಾಮ ಮಂದಿರದಲ್ಲಿ ಭಾನುವಾರ ನಡೆಯಿತು.

ಶೈಲಾ ಎಸ್.ರಾವ್ ಶಿಬಿರ ಉದ್ಘಾಟಿಸಿದರು. ಡಾ.ಗಿರಿಜಾ ಮಣಿಪಾಲ ಅಧ್ಯಕ್ಷತೆ ವಹಿಸಿದ್ದರು. ರಾಜವರ್ಮ ಆರಿಗ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಶೆಟ್ಟಿ , ವರಂಗ ಸಹಕಾರಿ ವ್ಯವಸಾಯ ಸಂಘ ಅಧ್ಯಕ್ಷ ಲಕ್ಷ್ಮಣ ಆಚಾರ್ಯ, ಹೆಬ್ರಿ ರೋಟರಿ ಗ್ರಾಮೀಣ ದಳ ಅಧ್ಯಕ್ಷ ಎಚ್.ರಾಮಕೃಷ್ಣ ಆಚಾರ್ಯ, ಡಾ.ಅಶ್ವಿನಿಕುಮಾರ್, ಡಾ.ರಂಜಿತಾ ಶೆಟ್ಟಿ, ಡಾ.ಅಖಿಲ, ಡಾ.ಅಂಜನಾ, ಪುಷ್ಪಲತಾ ಉಪಸ್ಥಿತರಿದ್ದರು. ಚಂದ್ರಶೇಖರ್ ಬಾಯರಿ ಸ್ವಾಗತಿಸಿದರು. ಪ್ರಕಾಶ್ ಭಟ್ ವಂದಿಸಿದರು. ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net