ವ್ಯಾಯಾಮದಿಂದ ಉತ್ತಮ ಸ್ವಾಸ್ಥ್ಯ

chn pandomatti
Published on

ಚನ್ನಗಿರಿ: ಒತ್ತಡವು ಆರೋಗ್ಯವನ್ನು ಹದಗೆಡಿಸುತ್ತದೆ. ನೆಮ್ಮದಿಯ ಬದುಕು ನಡೆಸಲು ನಿತ್ಯ ವ್ಯಾಯಾಮ ಮಾಡಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ಶುಕ್ರವಾರ ಲಿಂ. ಶ್ರೀ ಸಂಗಮನಾಥ ಮಹಾಸ್ವಾಮಿಗಳ 63ನೇ, ಶ್ರೀ ಚನ್ನಬಸವ ಮಹಾಸ್ವಾಮಿಗಳ 18ನೇ ವರ್ಷದ ಸ್ಮರಣೋತ್ಸವ ಮತ್ತು ಬಸವತತ್ವ ಸಮ್ಮೇಳನ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರು ಹಣ ಸಂಪಾದಿಸಬೇಕು ಎಂಬ ಯೋಚನೆಯಲ್ಲಿ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆಗೆ ಹಣ ವ್ಯಯ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಣೆ, ಶುದ್ಧ ನೀರು ಕುಡಿಯುವುದು, ಪರಿಸರ ಸ್ವಚ್ಛವಾಗಿಡುವುದರಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದರು.

ಬೆಂಗಳೂರು ಸಪ್ತಗಿರಿ ಆಸ್ಪತ್ರೆ ವೈದ್ಯ ಡಾ. ಗಿರೀಶ್ ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ಅವರ ಜೀವನ ಶೈಲಿಯೂ ಚೆನ್ನಾಗಿರುತ್ತದೆ. ಶುದ್ಧ ಗಾಳಿ, ನೀರು, ಬೆಳಕು ಇರುವ ಪರಿಸರ ನಿರ್ವಿುಸಿಕೊಳ್ಳಿ. ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೇ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

ನರರೋಗ, ಬೆನ್ನುನೋವು, ಕಿವಿ, ಮೂಗು, ಗಂಟಲು, ಮೂಳೆ ಮತ್ತು ಕೀಲುರೋಗ, ಬಿಪಿ ಮತ್ತು ಸಕ್ಕರೆ ಕಾಯಿಲೆ, ಮೂತ್ರಪಿಂಡದ ತೊಂದರೆ, ಕಣ್ಣಿನ ತಪಾಸಣೆ ಮತ್ತು ಮಕ್ಕಳ ತಪಾಸಣೆ ನಡೆಸಲಾಯಿತು.

ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ಡಾ. ಪ್ರಶಾಂತ್, ಡಾ. ಎ. ಶ್ರವಣರೆಡ್ಡಿ, ಡಾ. ತನು, ಡಾ. ಗ್ರೀಷ್ಮಾ, ಗ್ರಾಮದ ಮುಖಂಡ ಧನಂಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net