ದೇಶಪ್ರೇಮಿಗಳು ಅಜಾರಾಮರ : ಶಾಸಕ ಉಮಾನಾಥ ಕೋಟ್ಯಾನ್ ವಿಶ್ಲೇಷಣೆ

New Project (22)
Published on

ಕಿನ್ನಿಗೋಳಿ: ದೇಶಪ್ರೇಮಿ ದಿ.ಸುಖಾನಂದ ಶೆಟ್ಟಿಯಂತಹ ಹಿಂದು ನಾಯಕರು ಸದಾ ಅಜಾರಾಮರ. ಅವರ ಸ್ಮರಣಾರ್ಥ ಅಂಗರಗುಡ್ಡೆ ಶ್ರೀ ರಾಮ ಫ್ರೆಂಡ್ಸ್ ಹಮ್ಮಿಕೊಂಡ ಸಹಾಯಹಸ್ತ ಕಾರ್ಯಕ್ರಮ ಶ್ಲಾನೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅಂಗರಗುಡ್ಡೆ ಶ್ರೀರಾಮ ಭಜನಾ ಮಂಡಳಿಯ ಸಮೀಪದಲ್ಲಿ ಅಂಗರಗುಡ್ಡೆ ಶ್ರೀರಾಮ ಫ್ರೆಂಡ್ಸ್ ಆಶ್ರಯದಲ್ಲಿ ಸಹಾಯಹಸ್ತ ಯೋಜನೆಯ ಸಹಯೋಗದೊಂದಿಗೆ ದಿ.ಸುಖಾನಂದ ಶೆಟ್ಟಿ ಸ್ಮರಣಾರ್ಥ ಸುವಾರು 100 ಜನರಿಗೆ ಅಂಚೆ ಇಲಾಖೆಯ ರೂ.10 ಲಕ್ಷದ ಅಪಘಾತ ವಿಮೆ ನೋಂದಣಿ, ಮುಕ್ಕ ಶ್ರೀನಿವಾಸ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಶಿಬಿರ, ಹಗ್ಗ ಜಗ್ಗಾಟ ಹಾಗೂ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ವಾತನಾಡಿದರು.

ಶಾಸಕ ಉವಾನಾಥ ಕೋಟ್ಯಾನ್ ಹಾಗೂ ಕಾಪು ಶಾಸಕ ಗುರ್ಮೆ ಉಪಸ್ಥಿತಿಯಲ್ಲಿ ಹಲವಾರು ಮಂದಿಗೆ ಅಂಚೆ ಇಲಾಖೆಯ 10 ಲಕ್ಷ ರೂ. ವೆಚ್ಚದ ಉಚಿತ ಅಪಘಾತ ವಿಮೆ ಪಾಲಿಸಿ ಹಸ್ತಾಂತರ ವಾಡಲಾಯಿತು. ಸ್ಥಳೀಯರಾದ ಈಶ್ವರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು.

ಮೂಲ್ಕಿ - ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಮಂಜಣ್ಣ ಬ್ರಿಗೇಡ್ ಸ್ಥಾಪಕ ಅಧ್ಯಕ್ಷ ಮನೋಜ್ ಕೋಡಿಕೆರೆ, ಯುಗಪುರುಷದ ಭುವನಾಭಿರಾಮ ಉಡುಪ, ಬಿಜೆಪಿ ದ.ಕ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಕಸ್ತೂರಿ ಪಂಜ, ಲಕ್ಷ್ಮಣ್ ಕೋಟ್ಯಾನ್, ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜಿಪಂ ವಾಜಿ ಸದಸ್ಯ ವಿನೋದ್ ಬೊಳ್ಳೂರು, ವಿನೋದ್ ಬೆಳ್ಳಾಯರು, ತಾ.ಪಂ. ವಾಜಿ ಸದಸ್ಯ ದಿವಾಕರ ಕರ್ಕೇರ, ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಶೈಲೇಶ್ ಅಂಚನ್, ಗ್ರಾಪಂ ಸದಸ್ಯ ಕೃಷ್ಣ ಶೆಟ್ಟಿಗಾರ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿವಾ, ರಾಮ ಭಜನಾ ಮಂದಿರ ಅಧ್ಯಕ್ಷ ಸಂಪತ್ ಕುವಾರ್ ಉಪಸ್ಥಿತರಿದ್ದರು.

ಸಂಟಕ ಜೀವನ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ನಿರೂಪಿಸಿದರು. ಸುಧೀರ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net