ಗುರುಪುರದಲ್ಲಿ ಆರೋಗ್ಯ, ಆಧಾರ್, ನೇತ್ರ ಚಿಕಿತ್ಸಾ ಶಿಬಿರ

Gur_Health Camp
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಶ್ರೀಕೃಷ್ಣ ಮಿತ್ರ ಮಂಡಳಿ ವತಿಯಿಂದ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ, ಗಂಜಿಮಠದ ಆಯುರ್‌ಸ್ಪರ್ಶ್ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್, ಕಂಕನಾಡಿ ಪಡೀಲ್ ಲಯನ್ಸ್ ಕ್ಲಬ್ ಮತ್ತು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಹಭಾಗಿತ್ವದಲ್ಲಿ ಭಾನುವಾರ ಗುರುಪುರದಲ್ಲಿ ಆಧಾರ್ ನೋಂದಣಿ, ಮಧುಮೇಹ ಜಾಗೃತಿ, ಕಣ್ಣಿನ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು.

ಮಂಗಳೂರು ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಅಂಚೆ ಇಲಾಖೆಯ ಉಪ ಅಧೀಕ್ಷಕ ದಿನೇಶ್, ಮಂಗಳೂರು ಕಂಕನಾಡಿಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಹರಿಣಿ ಸಿ.ಶೆಟ್ಟಿ, ಗಂಜಿಮಠದ ಆಯುರ್‌ಸ್ಪರ್ಶ ಆಸ್ಪತ್ರೆಯ ಅಧ್ಯಕ್ಷ ಡಾ.ಸತೀಶ್ ಶಂಕರ್ ಶುಭ ಹಾರೈಸಿದರು.

ಡಾ.ವೀರೇಂದ್ರ ಭಟ್ ಗುರುಪುರ, ಶ್ರೀಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಯತೀಶ್ ಕುಲಾಲ್, ಗೌರವಾಧ್ಯಕ್ಷ ಹರೀಶ್ ಭಂಡಾರಿ ಗುರುಪುರ, ನಾಗರಾಜ್ ಕಾಮತ್, ಡಾ.ಗೋವಿಂದ ಉಪಸ್ಥಿತರಿದ್ದರು. ಲಕ್ಷ್ಮಣ್ ಶೆಟ್ಟಿಗಾರ, ಜಿ.ಎಂ.ಉದಯ ಭಟ್, ರಾಜೇಶ್ ಸುವರ್ಣ, ಶ್ರೀಕರ ವಿ.ಶೆಟ್ಟಿ ಸುಧೀರ್ ಕಾಮತ್, ನಳಿನಿ ಶೆಟ್ಟಿ, ಗಜಾನನ ಪ್ರಭು, ಸುನೀಲ್ ಜಲ್ಲಿಗುಡ್ಡೆ, ಹರೀಶ್ ಬಳ್ಳಿ ಹಾಗೂ ಮಂಡಳಿಯ ಪದಾಧಿಕಾರಿಗಳು ಸಹಕರಿಸಿದರು. ಪ್ರಜ್ವಲ್ ಗುರುಪುರ ವಂದಿಸಿದರು.

ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಮಾಜಿ ಸಂಸದ ಶಿಬಿರಕ್ಕೆ ಭೇಟಿ ನೀಡಿ ಆಯೋಜಕರನ್ನು ಅಭಿನಂದಿಸಿದರು. ಆಧಾರ್ ತಿದ್ದುಪಡಿ, ಹೊಸ ಆಧಾರ್ ಕಾರ್ಡ್, ಆರೋಗ್ಯ ತಪಾಸಣೆ, ಮಧುಮೇಹ ಪರೀಕ್ಷೆ, ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ, ಪಾರ್ಸ್‌ಪೋರ್ಟ್, ಅಂಚೆ ವಿಮೆ ಮತ್ತಿತರ ಸೇವೆಗಳ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದುಕೊಂಡರು. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸ್ಥಳೀಯ ನಿವಾಸಿ ಕರುಣಾಕರ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net