ರಜೋನಿವೃತ್ತಿ ಗಂಭೀರ ಆರೋಗ್ಯ ಸಮಸ್ಯೆಯಲ್ಲ : ಡಾ.ಭಾರತಿ ಗೋಪಾಲಕೃಷ್ಣ ಹೇಳಿಕೆ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವಿಶ್ವ ರಜೋನಿವೃತ್ತಿ ದಿನಾಚರಣೆಯ(ಮೆನೋಪಾಸ್ ದಿನ) ಅಂಗವಾಗಿ ಬೆನಕ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.

ಡಾ.ಭಾರತಿ ಗೋಪಾಲಕೃಷ್ಣ ಶಿಬಿರ ಉದ್ಘಾಟಿಸಿ ಮಾತನಾಡಿ, ರಜೋನಿವೃತ್ತಿ ಎಂಬುದು ಚರ್ಚೆಯ ವಿಷಯವಲ್ಲ, ಗಂಭೀರ ಆರೋಗ್ಯ ಸಮಸ್ಯೆಯಲ್ಲ. ಇದು ಮಹಿಳೆಯರಲ್ಲಿ 45 ವರ್ಷ ವಯಸ್ಸಿನ ನಂತರ ಸಹಜವಾಗಿ ನಡೆಯುವ ಪ್ರಕ್ರಿಯೆ. ಮಹಿಳೆಯರು ರಜೋನಿವೃತ್ತಿಯ ನಂತರವೂ ನೋವಿಲ್ಲದೆ, ಚೈತನ್ಯಭರಿತವಾಗಿ ಬದುಕಬಹುದು. ಆದರೆ ಅದಕ್ಕಾಗಿ ಸರಿಯಾದ ಸಮಯದಲ್ಲಿ ತಕ್ಕ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ ಎಂದರು.

ಸ್ತ್ರೀರೋಗ ಹಾಗೂ ಲ್ಯಾಪರೋಸ್ಕೋಪಿಕ್ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಅಂಕಿತಾ ಮಾತನಾಡಿ, ಮಹಿಳೆಯರು 40ರಿಂದ 45 ವರ್ಷ ವಯಸ್ಸಿನ ನಂತರ ರಜೋನಿವೃತ್ತಿ ಅನುಭವಿಸುತ್ತಾರೆ. ಇದು ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದ್ದು, ಇದನ್ನು ಸಮಸ್ಯೆಯೆಂದು ಭಾವಿಸಬಾರದು. ಈ ಅವಧಿಯಲ್ಲಿ ಅನೇಕ ಬದಲಾವಣೆಗಳು ಕಾಣಿಸಬಹುದು. ಸಮಯಕ್ಕೆ ಸರಿಯಾದ ತಪಾಸಣೆ ಮಾಡಿಸಿಕೊಂಡರೆ ಪರಿಹಾರ ದೊರೆಯುತ್ತದೆ. ರಜೋನಿವೃತ್ತಿ ಸಮಸ್ಯೆಯಲ್ಲ. ಪ್ರತಿ ಮಹಿಳೆಯೂ ಎದುರಿಸುವ ಒಂದು ಹಂತ. ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ, ನಾವು ಚಿಕಿತ್ಸೆ ನೀಡುತ್ತೇವೆ ಎಂದರು.

ಬೆನಕ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ದೇವಸ್ಯ ವರ್ಗೀಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಪಿಆರ್‌ಒ ಎಸ್.ಜಿ.ಭಟ್ ವಂದಿಸಿದರು.

ಪ್ರತಿ ಮಹಿಳೆಯ ಸಮಸ್ಯೆಗೆ ಪರಿಹಾರ ಮತ್ತು ಚಿಕಿತ್ಸೆ ಇದೆ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ತೆರೆದ ಮನಸ್ಸಿನಿಂದ ಹಂಚಿಕೊಂಡರೆ ಮಾತ್ರ ನಾವು ಸರಿಯಾದ ಚಿಕಿತ್ಸೆ ನೀಡಲು ಸಾಧ್ಯ. ಇಂದಿನ ಉಚಿತ ಶಿಬಿರದ ಮೂಲಕ ನಾವು ಮಹಿಳೆಯರಿಗೆ ಪರಿಹಾರ ನೀಡುತ್ತಿದ್ದೇವೆ. ಡಾ.ನವ್ಯಾ ಭಟ್ ಸ್ತ್ರೀರೋಗ ಹಾಗೂ ಐವಿಎಫ್ ತಜ್ಞೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net